ಸದನದಲ್ಲಿ ಸಿಡಿದೆದ್ದ ರಾಹುಲ್ ಗಾಂಧಿ| ಕರ್ನಾಟಕ ರಾಜಕೀಯ ವಿಪ್ಲವಕ್ಕೆ ಬಿಜೆಪಿ ಕಾರಣ ಎಂದ ರಾಹುಲ್| ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ರಾಹುಲ್ ಗಾಂಧಿ| ಸ್ಪೀಕರ್ ನಡೆಗೆ ಗರಂ ಆದ ರಾಹುಲ್ ಗಾಂಧಿ ಪ್ರತಿಭಟನೆ|

ನವದೆಹಲಿ(ಜು.09): ಲೋಕಸಭೆಯಲ್ಲಿ ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಘೋಷಣೆಗಳನ್ನು ಕೂಗುವುದರ ಮೂಲಕ ಗಮನ ಸೆಳೆದಿದ್ದಾರೆ.

ಸದನದಲ್ಲಿ ಕರ್ನಾಟಕ ರಾಜಕಾರಣದ ವಿಪ್ಲವದ ಕುರಿತು ಚರ್ಚೆ ನಡೆಯುತ್ತಿತ್ತು. ಆದರೆ ಈ ವೇಳೆ ಸ್ಪೀಕರ್ ಪ್ರತಿಕ್ರಿಯೆ ಕಂಡು ಸಿಟ್ಟಾದ ರಾಹುಲ್, ಕೂಡಲೇ ಹಾಳೆಯ ಮೇಲೆ ತಾನಾ ಶಾಹೀ ಬಂದ್ ಕರೋ(ಸರ್ವಾಧಿಕಾರಿ ಧೋರಣೆ ನಿಲ್ಲಿಸಿ) ಎಂದು ಬರೆದು ಭಿತ್ತಿಪತ್ರ ಪ್ರದರ್ಶಿಸಿದರು.

Scroll to load tweet…


ರಾಹುಲ್ ಅವರಿಗೆ ಸಾಥ್ ನೀಡಿದ ಇತರ ಕಾಂಗ್ರೆಸ್ ಸದಸ್ಯರು, ಕರ್ನಾಟಕದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಸಂಸದರಾದ ಬಳಿಕ ಇದೇ ಮೊದಲ ಬಾರಿಗೆ ರಾಹುಲ್ ಸದನದಲ್ಲಿ ಘೋಷಣೆ ಕೂಗಿದ್ದು, ಕಾಂಗ್ರೆಸ್ ಸದಸ್ಯರನ್ನಷ್ಟೇ ಅಲ್ಲದೇ ಬಿಜೆಪಿ ಸದಸ್ಯರನ್ನೂ ಅಚ್ಚರಿಗೆ ದೂಡಿತು.