ತಮ್ಮ 19 ವರ್ಷಗಳ ಅಧ್ಯಕ್ಷ ಪದವಿಯನ್ನು ಪುತ್ರನಿಗೆ ವಹಿಸಿ ಗೋವಾದಲ್ಲಿ ರಜಾ ಕಳೆಯುತ್ತಿರುವ ಸೋನಿಯಾ ಗಾಂಧಿ ಅವರೊಂದಿಗೆ ಹೊಸ ವರ್ಷ ಆಚರಣೆಗೆ ರಾಹುಲ್ ಗಾಂಧಿ ಕೂಡ ಸೇರಿಕೊಂಡಿದ್ದಾರೆ.
ನವದೆಹಲಿ (ಡಿ.31): ತಮ್ಮ 19 ವರ್ಷಗಳ ಅಧ್ಯಕ್ಷ ಪದವಿಯನ್ನು ಪುತ್ರನಿಗೆ ವಹಿಸಿ ಗೋವಾದಲ್ಲಿ ರಜಾ ಕಳೆಯುತ್ತಿರುವ ಸೋನಿಯಾ ಗಾಂಧಿ ಅವರೊಂದಿಗೆ ಹೊಸ ವರ್ಷ ಆಚರಣೆಗೆ ರಾಹುಲ್ ಗಾಂಧಿ ಕೂಡ ಸೇರಿಕೊಂಡಿದ್ದಾರೆ.
ಶನಿವಾರ ರಾತ್ರಿಯೇ ರಾಹುಲ್ ಗೋವಾಗೆ ತೆರಳಿದ್ದಾರೆ. ಕಳೆದ ಕೆಲ ದಿನಗಳಿಂದ ಸೋನಿಯಾ ಗಾಂಧಿ ಅವರು ಇರುವ ಬೀಚ್ ರೆಸಾರ್ಟ್’ಗೆ ತೆರಳಿದ್ದಾರೆ.
ರಾಹುಲ್ ಅವರು ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಗೋವಾಗೆ ತೆರಳಿದ್ದು, ಇದು ಸಂಪೂರ್ಣ ಖಾಸಗಿ ಭೇಟಿಯಾಗಿದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ಇಲ್ಲಿ ಸಮಯ ಕಳೆಯಲಿದ್ದಾರೆ ಎಂದು ಹೇಳಿದ್ದಾರೆ.
ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಗೋವಾದಲ್ಲಿ ರಾಹುಲ್ ಹೊಸ ವರ್ಷವನ್ನು ಇಲ್ಲಿ ಆಚರಣೆ ಮಾಡುತ್ತಿದ್ದಾರೆ.
