ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಟ್ವಿಟರ್ ಹೆಸರನ್ನು ಬದಲಾಯಿಸಿದ್ದಾರೆ.
ದಿಲ್ಲಿ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಟ್ವಿಟರ್ ಹೆಸರನ್ನು ಬದಲಾಯಿಸಿದ್ದಾರೆ. ಇಷ್ಟು ದಿನ @OfficeOfRG ಎಂದು ಇದ್ದ ಟ್ವಿಟರ್ ಹ್ಯಾಂಡಲ್ ಇದೀಗ Rahul Gandhiಎಂದು ಬದಲಾಯಿಸಿಕೊಳ್ಳಲಾಗಿದೆ.
ಇನ್ನುಮುಂದೆ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆ ಇದೇ ಹೆಸರಿನಿಂದ ನಿರ್ವಹಣೆಯಾಗಲಿದೆ. ಎಐಸಿಸಿ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿ ಖಾತೆಯಲ್ಲಿ ಕಳೆದೊಂದು ವರ್ಷಗಳಿಂದ ನಿರ್ವಹಣೆ ಮಾಡುತ್ತಿದ್ದು, ಇದೀಗ ಹೆಸರಿನ ಬದಲಾವಣೆಯಾಗಿದೆ.
ಇತ್ತೀಚೆಗಷ್ಟೇ ರಾಹುಲ್ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಹಿಂಬಾಲಕರಲ್ಲಿ ಹೆಚ್ಚಿನ ಸಂಖ್ಯೆಯು ಫೇಕ್ ಎಂದು ಸುದ್ದಿಯೊಂದು ಕೂಡ ಹಬ್ಬಿತ್ತು.
