2009ರಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾದೆ. ಅಂದಿನಿಂದಲೂ ನಾವು ಮಾರ್ಷಲ್ ಆರ್ಟ್ ಅಭ್ಯಾಸ ಮಾಡುತ್ತಿದ್ದೇವೆ. ದೆಹಲಿಯ 12, ತುಘಲಕ್ ಲೇನ್ ರಸ್ತೆಯಲ್ಲಿ ರಾಹುಲ್ ತಮ್ಮ ಇಬ್ಬರು ಸ್ನೇಹಿತರ ಜತೆ ಅಭ್ಯಾಸ ಮಾಡಿದ್ದಾರೆ. 2013ರಲ್ಲಿ ಐಕಿಡೋ ಮಾಸ್ಟರ್ ಒಬ್ಬರು ಜಪಾನ್ ನಿಂದ ಭಾರತಕ್ಕೆ ಬಂದಿದ್ದರು.
ನವದೆಹಲಿ(ಅ.29): ರಾಹುಲ್ ಗಾಂಧಿ ಸಕ್ರಿಯ ರಾಜಕಾರಣಿಯಷ್ಟೇ ಅಲ್ಲ. ಅವರು ಬ್ರೆಜಿಲ್‌ನ ಮಾರ್ಷಲ್ ಆರ್ಟ್ ಜಿಯು-ಜಿಟ್ಸು ಕಲಿತಿದ್ದಾರೆ. ಜಪಾನ್‌ನ ಮಾರ್ಷಲ್ ಆರ್ಟ್ ಐಕಿಡೋದಲ್ಲಿ ಬ್ಲ್ಯಾಕ್‌ಬೆಲ್ಟ್ ಪಡೆದಿದ್ದಾರೆ. ಕತ್ತಿ ವರಸೆಯೂ ಅವರಿಗೆ ಗೊತ್ತಿದೆ! ಅಚ್ಚರಿಯಾದರೂ ಇದು ನಿಜ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಬಾಕ್ಸರ್ ವಿಜೇಂದ್ರ ಸಿಂಗ್ ಅವರು ಮಾತನಾಡಿ, ರಾಜಕಾರಣಿಗಳೇಕೆ ಕ್ರೀಡೆಯಲ್ಲಿ ಸಕ್ರಿಯರಾಗಿಲ್ಲ ಎಂದು ರಾಹುಲ್ ಅವರನ್ನು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ್ದ ರಾಹುಲ್, ಜಪಾನ್ ಮಾರ್ಷಲ್ ಆರ್ಟ್ ಐಕಿಡೋದಲ್ಲಿ ತಾವು ಬ್ಲ್ಯಾಕ್‌ಬೆಲ್ಟ್ ಪಡೆದಿರುವುದಾಗಿ ಹೇಳಿದ್ದರು. ಅದು ಆನ್‌ಲೈನ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ನಡುವೆ, ಮಾಧ್ಯಮವೊಂದು ರಾಹುಲ್‌ರ ಐಕಿಡೋ ಕೋಚ್ ಸೆನ್ಸೆಯ್ ಪ್ಯಾರಿಟೋಸ್ ಕಾರ್ ಅವರನ್ನು ಸಂದರ್ಶನ ಮಾಡಿದೆ. ರಾಹುಲ್ ಮಾರ್ಷಲ್ ಆರ್ಟ್ ಅಭ್ಯಾಸ ಮಾಡಿರುವುದು ನಿಜ ಎಂದು ತಿಳಿಸಿದ್ದಾರೆ.
2009ರಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾದೆ. ಅಂದಿನಿಂದಲೂ ನಾವು ಮಾರ್ಷಲ್ ಆರ್ಟ್ ಅಭ್ಯಾಸ ಮಾಡುತ್ತಿದ್ದೇವೆ. ದೆಹಲಿಯ 12, ತುಘಲಕ್ ಲೇನ್ ರಸ್ತೆಯಲ್ಲಿ ರಾಹುಲ್ ತಮ್ಮ ಇಬ್ಬರು ಸ್ನೇಹಿತರ ಜತೆ ಅಭ್ಯಾಸ ಮಾಡಿದ್ದಾರೆ. 2013ರಲ್ಲಿ ಐಕಿಡೋ ಮಾಸ್ಟರ್ ಒಬ್ಬರು ಜಪಾನ್ ನಿಂದ ಭಾರತಕ್ಕೆ ಬಂದಿದ್ದರು. ಅವರು ನಡೆಸಿದ ಪರೀಕ್ಷೆಯಲ್ಲಿ ರಾಹುಲ್ ಉತ್ತೀರ್ಣರಾದ ಕಾರಣ ಅವರಿಗೆ ಬ್ಲ್ಯಾಕ್‌ಬೆಲ್ಟ್ ಲಭಿಸಿದೆ. ಇದಲ್ಲದೆ ಜಪಾನ್‌ನಲ್ಲಿ 10 ದಿನಗಳ ಕಾಲ ಇದ್ದು ಮತ್ತೊಂದು ಮಾರ್ಷಲ್ ಆರ್ಟ್ ಕಲಿತಿದ್ದಾರೆ. ಬ್ರೆಜಿಲ್‌ನ ಜಿಯು-ಜಿಟ್ಸು ಮಾರ್ಷಲ್ ಆರ್ಟ್ ಅನ್ನು ಲಂಡನ್‌ನಲ್ಲಿ ಕಲಿತಿದ್ದಾರೆ. ಕತ್ತಿ ವರಸೆಯೂ ಅವರಿಗೆ ತಿಳಿದಿದೆ ಎಂದು ಮಾಹಿತಿ ನೀಡಿದ್ದಾರೆ.
