ಜಂಟಿಯಾಗಿ ರ್ಯಾಲಿ ನಡೆಸುತ್ತಾ ಪ್ರಚಾರ ಮಾಡುತ್ತಿರುವ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್, ಭಾರೀ ಬಿರುಸಿನ ಪ್ರಚಾರದಲ್ಲಿದ್ದಾರೆ.
ನವದೆಹಲಿ (ಫೆ.02): ಪಂಚರಾಜ್ಯ ರಾಜ್ಯಗಳ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಬಿಜೆಪಿ ವಿರುದ್ಧ ಬಲಾಬಲ ಸಾಧಿಸಲು ಮುಂದಾಗಿರುವ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು, ಚುನಾವಣೆ ಅಖಾಡದಲ್ಲಿ ಯುದ್ಧಕ್ಕೆ ಸಜ್ಜಾಗಿ ನಿಂತಿದ್ದಾರೆ.
ಜಂಟಿಯಾಗಿ ರ್ಯಾಲಿ ನಡೆಸುತ್ತಾ ಪ್ರಚಾರ ಮಾಡುತ್ತಿರುವ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್, ಭಾರೀ ಬಿರುಸಿನ ಪ್ರಚಾರದಲ್ಲಿದ್ದಾರೆ.
ಇಂದು ಪಂಜಾಬ್’ನಲ್ಲಿ ರೈತರೊಂದಿಗೆ ರಾಹುಲ್ ಗಾಂಧಿ ಸಮಾಲೋಚನೆ ನಡೆಸಿದ್ದಾರೆ. ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಅಖಿಲೇಶ್ ದೇಶದಾದ್ಯಂತ ಸಿಕ್ಕ ಕಪ್ಪು ಹಣ ಎಲ್ಲಿದೆಯೆಂದು ಪ್ರಶ್ನಿಸಿದ್ದಾರೆ.
ಕೇಂದ್ರದ ಕ್ರಮದಿಂದ ರೈತರಿಗೆ ಯಾವ ಉಪಯೋಗವೂ ಇಲ್ಲ. ರೈತರನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಅಖಿಲೇಶ್ ವಾಗ್ದಾಳಿ ನಡೆಸಿದ್ದಾರೆ.