ಭಾರತೀಯ ವಾಯುಪಡೆಯ ಅರ್ಜನ್ ಸಿಂಗ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬುದಾಗಿ ಟ್ವೀಟಿಸುವ ವೇಳೆ ರಾಹುಲ್ ಈ ಅಚಾತುರ್ಯ ಮಾಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ನವದೆಹಲಿ(ಸೆ.17): ರಾಹುಲ್ ಗಾಂಧಿ ಮತ್ತೆ ಎಡವಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕದಲ್ಲಿ ಮಾತನಾಡುವ ವೇಳೆ ಭಾರತದಲ್ಲಿ 546 ಲೋಕಸಭಾ ಕ್ಷೇತ್ರಗಳಿವೆ ಎಂದು ತಪ್ಪಾಗಿ ಹೇಳಿದ್ದ ರಾಹುಲ್ ಗಾಂಧಿ, ಶನಿವಾರವಷ್ಟೇ ಕೊನೆಯುಸಿರೆಳೆದ ಭಾರತೀಯ ವಾಯುಪಡೆಯ ಮಾರ್ಷಲ್ ಅರ್ಜನ್ ಸಿಂಗ್ ಅವರನ್ನು ಏರ್ ಮಾರ್ಷಲ್( ವಾಯುದಳದ ಉನ್ನತಾಧಿಕಾರಿಗಳಲ್ಲಿ ಒಬ್ಬರು) ಎಂಬ ಅರ್ಥ ಬರುವಂತೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಭಾರತೀಯ ವಾಯುಪಡೆಯ ಅರ್ಜನ್ ಸಿಂಗ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬುದಾಗಿ ಟ್ವೀಟಿಸುವ ವೇಳೆ ರಾಹುಲ್ ಈ ಅಚಾತುರ್ಯ ಮಾಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ಭಾರತೀಯ ವಾಯುಪಡೆಯ ಮಾರ್ಷಲ್ ಆಗಿದ್ದ ಅರ್ಜನ್ ಸಿಂಗ್ ಅವರು ಫೀಲ್ಡ್ ಮಾರ್ಷಲ್ ಹುದ್ದೆಗೆ ಸರಿಸಮನಾದ ಐದು ಸ್ಟಾರ್ ಅನ್ನು ಹೊಂದಿದ್ದರು. ಆದರೆ, ಏರ್ ಮಾರ್ಷಲ್ ಎಂಬುದು ಮೂರು ಸ್ಟಾರ್‌ಗೆ ಸೀಮಿತವಾಗಿದೆ. ತಮ್ಮ ತಪ್ಪಿನ ಅರಿವಾಗುತ್ತಿದ್ದಂತೆ ರಾಹುಲ್ ಗಾಂಧಿ ಅವರು ತಮ್ಮ ಹಿಂದಿನ ಪೋಸ್ಟ್ ಅನ್ನು ತೆಗೆದು ಹಾಕಿ, ಭಾರತೀಯ ವಾಯುಪಡೆಯ ಮಾರ್ಷಲ್ ಅರ್ಜನ್ ಸಿಂಗ್ ಅವರ ನಿಧನ ದೇಶಕ್ಕೆ ತುಂಬಲಾಗದ ನಷ್ಟ ಎಂದು ಹೊಸದಾಗಿ ಟ್ವೀಟ್ ಮಾಡಿದ್ದಾರೆ.