ಅಮೇಠಿ, ಉತ್ತರ ಪ್ರದೇಶ (ಸೆ.01): ಪ್ರಧಾನಿ ನರೇಂದ್ರ ಮೋದಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಅಮೇಠಿ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ರದ್ದುಪಡಿಸಿದ್ದಾರೆ. ಅಮೇಠಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಾನು ಸೇಡಿನ ರಾಜಕೀಯ ಮಾಡುವುದಿಲ್ಲವೆಂದಿದ್ದ ಮೋದಿಯವರು ಈಗ ಅದನ್ನೇ ಮಾಡುತ್ತಿದ್ದಾರೆ, ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಹಿಂದುಸ್ತಾನ್ ಕಾಗದ ಕಾರ್ಖಾನ್, ಬೃಹತ್ ಫುಡ್ ಪಾರ್ಕ್, ಹಾಗೂ ಐಐಐಟಿ ಯೋಜನೆಗಳನ್ನು ಮೋದಿ ರದ್ದುಗೊಳಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಅಮೇಠಿ ಜನರು ಯಾವುದೇ ತಪ್ಪು ಎಸಗಿಲ್ಲ; ಯೋಜನೆಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗುತ್ತಿದೆ. ಅಭಿವೃದ್ಧಿಯ ಮಾತುಗಳನ್ನಾಡಿದ್ದ ಮೋದಿಯವರು ಜನರಿಗೆ ಕಷ್ಟಕ್ಕೀಡು ಮಾಡುತ್ತಿದ್ದಾರೆ, ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.