Asianet Suvarna News Asianet Suvarna News

ನಡಾಲ್'ಗೆ ಅಮೆರಿಕನ್ ಓಪನ್ ಕಿರೀಟ

ವಿಶ್ವ ನಂಬರ್ 1 ಆಟಗಾರ 2010 ಹಾಗೂ 2013ರಲ್ಲೂ ಯುಎಸ್ ಓಪನ್ ಪ್ರಶಸ್ತಿ ಗೆದ್ದಿದ್ದರು. ಇದು ಈ ವರ್ಷ ಅವರು ಗೆಲ್ಲುತ್ತಿರುವ 2ನೇ ಗ್ರ್ಯಾಂಡ್‌ಸ್ಲಾಂ. ಜೂನ್‌ನಲ್ಲಿ ದಾಖಲೆಯ 10ನೇ ಬಾರಿಗೆ ಫ್ರೆಂಚ್ ಓಪನ್ ಕಿರೀಟವನ್ನು ನಡಾಲ್ ಮುಡಿಗೇರಿಸಿಕೊಂಡಿದ್ದರು.

Rafael Nadal could surpass Roger Federer as the best

ನ್ಯೂಯಾರ್ಕ್(ಸೆ.11): ರಾಫೆಲ್ ನಡಾಲ್ 2017ರ ಅಮೆ ಓಪನ್ ಪುರುಷರ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದು ನಾಡಲ್'ನ 3ನೇ ಯುಎಸ್ ಹಾಗೂ 16ನೇ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಯಾಗಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸ್ಪೇನ್ ಆಟಗಾರ 6-3, 6-3, 6-4 ನೇರ ಸೆಟ್‌ಗಳಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್‌ಸನ್ ವಿರುದ್ಧ ನಿರೀಕ್ಷೆಯಂತೆ ಸುಲಭ ಗೆಲುವು ಸಾಧಿಸಿದರು.

ವಿಶ್ವದ ನಂಬರ್ 1 ಆಟಗಾರ 2010 ಹಾಗೂ 2013ರಲ್ಲೂ ಯುಎಸ್ ಓಪನ್ ಪ್ರಶಸ್ತಿ ಗೆದ್ದಿದ್ದರು. ಇದು ಈ ವರ್ಷ ಅವರು ಗೆಲ್ಲುತ್ತಿರುವ 2ನೇ ಗ್ರ್ಯಾಂಡ್‌ಸ್ಲಾಂ. ಜೂನ್‌ನಲ್ಲಿ ದಾಖಲೆಯ 10ನೇ ಬಾರಿಗೆ ಫ್ರೆಂಚ್ ಓಪನ್ ಕಿರೀಟವನ್ನು ನಡಾಲ್ ಮುಡಿಗೇರಿಸಿಕೊಂಡಿದ್ದರು. ಈ ವರ್ಷ ನಡಾಲ್ ಗೆಲ್ಲುತ್ತಿರುವ ಒಟ್ಟಾರೆ 5ನೇ ಪ್ರಶಸ್ತಿ ಇದಾಗಿದೆ. ಅಲ್ಲದೇ ಅವರ ವೃತ್ತಿಬದುಕಿನಲ್ಲಿ ಇದು 74ನೇ ಪ್ರಶಸ್ತಿ. ಯುಎಸ್ ಓಪನ್ ಗೆಲುವಿನೊಂದಿಗೆ ನಡಾಲ್ ಅಂದಾಜು 23.66 ಕೋಟಿ ರೂ. ಬಹುಮಾನ ಮೊತ್ತವನ್ನು ತಮ್ಮದಾಗಿಸಿಕೊಂಡರು.

Follow Us:
Download App:
  • android
  • ios