ಇಸ್ಲಾಮಾಬಾದ್ (ನ.12): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಡೆದ ಜನಾಂಗೀಯ ಭೇಧ ಹಾಗೂ ನಿರ್ಲಕ್ಷ್ಯತನದಿಂದಾಗಿ ಡೊನಾಲ್ಡ್ ಟ್ರಂಪ್ ಅವರು ಗೆಲವು ಸಾಧಿಸಿದ್ದಾರೆಂದು ಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಶನಿವಾರ ಹೇಳಿದ್ದಾನೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಹಫೀಝ್, ಅಮೆರಿಕದಲ್ಲಿ ಇಂದು ಜ್ಞಾನ, ವಿವೇಕ, ತಿಳುವಳಿಕೆ ಮತ್ತು ಸಹಿಷ್ಣುತೆಗಳು ಸೋಲನ್ನು ಕಂಡಿದೆ. ಜನಾಂಗೀಯ ಭೇದ ಹಾಗೂ ನಿರ್ಲಕ್ಷ್ಯತನ ಗೆಲವು ಸಾಧಿಸಿದೆ. ದೇವರು ಟ್ರಂಪ್ ಅಧಿಕಾರದ ಮೂಲಕ ಅಮೆರಿಕ ರಾಷ್ಟ್ರವನ್ನು ಆಂತರಿಕ ಸಮಸ್ಯೆಗಳ ಒಳಗೆ ಸಿಕ್ಕಿಹಾಕಿಕೊಳ್ಳುವಂತೆ ಮಾಡಿದ್ದಾನೆಂದು ಹೇಳಿಕೊಂಡಿದ್ದಾನೆ.