ಬೆಂಗಳೂರು : ಇಲ್ಲಿರುವ ರೇಸ್‌ಕೋರ್ಸ್, ಗಾಲ್ಫ್ ಮೈದಾನಗಳನ್ನು ಮುಚ್ಚಿಬಿಡಿ. ಇದು ಕೂಡ ವಾಹನ ದಟ್ಟಣೆಗೆ ಕಾರಣವಾಗುತ್ತದೆ ಎಂದು ಬಿಜೆಪಿ ಆರ್.ಅಶೋಕ್ ಸರ್ಕಾರವನ್ನು ಒತ್ತಾಯಿಸಿದರು. 

ಬೆಂಗಳೂರಲ್ಲಿನ ವಾಹನ ದಟ್ಟಣೆ ಕುರಿತು ಚರ್ಚೆ ವೇಳೆ ಈ ಒತ್ತಾಯ ಮಾಡಿದ ಅವರು, ಶುಕ್ರವಾರ, ಶನಿವಾರ ಹಾಗೂ ಭಾನುವಾರ ರೇಸ್‌ಕೋರ್ಸ್ ರಸ್ತೆಯಲ್ಲಿ ತಿರುಗಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಡವರು ದುಡಿದ್ದರಲ್ಲಿ ಹೆಚ್ಚಿನ ಪಾಲನ್ನು ಇಲ್ಲಿಯೇ ಕಳೆದುಕೊಳ್ಳುತ್ತಿದ್ದಾರೆ. 

ಹಿಂದೆ ಯಾವಾಗಲೋ ನೀಡಿದ ಭೂಮಿಯಿದು. ಇದನ್ನು ಸರ್ಕಾರ ಮತ್ತೆ ತನ್ನ ವಶಕ್ಕೆ ಪಡೆದುಕೊಂಡರೆ ತಾನಾಗಿಯೇ ವಾಹನ ದಟ್ಟಣೆ ಕಡಿಮೆಯಾಗುತ್ತದೆ ಎಂದರು.