ತರಾತುರಿಯಲ್ಲಿ ಯೋಜನೆಗಳ ಉದ್ಘಾಟನೆ ಕಾಂಗ್ರೆಸ್’ನ ಎಲೆಕ್ಷನ್ ಗಿಮಿಕ್: ಅಶೋಕ್

First Published 26, Mar 2018, 1:52 PM IST
R Ashok Slams CM Siddaramaiah
Highlights
  • ಶಾಂತಿನಗರದಲ್ಲಿ ಆರ್. ಅಶೋಕ್ ಇಂದಿನಿಂದ ಎರಡನೇ ಹಂತದ ‘ಬೆಂಗಳೂರು ರಕ್ಷಿಸಿ’ ಪಾದಯಾತ್ರೆ
  • ತರಾತುರಿಯಲ್ಲಿ ಉದ್ಘಾಟನೆ  ಕಾಂಗ್ರೆಸ್‌ನ ಎಲೆಕ್ಷನ್ ಗಿಮಿಕ್ 

ಬೆಂಗಳೂರು: ಬೆಂಗಳೂರಿನ ಶಾಂತಿನಗರದಲ್ಲಿ ಆರ್. ಅಶೋಕ್ ಇಂದಿನಿಂದ ಎರಡನೇ ಹಂತದ ‘ಬೆಂಗಳೂರು ರಕ್ಷಿಸಿ’ ಪಾದಯಾತ್ರೆಯನ್ನು ಆರಂಭಿಸಿದ್ದಾರೆ.  

ಮೊದಲ ಹಂತದ ಅಭಿಯಾನ ಯಶಸ್ವಿಯಾಗಿತ್ತು, ಕಳೆದ ನಾಲ್ಕು ವರ್ಷದಿಂದ ಮಲಗಿದ್ದ ಸಿದ್ದರಾಮಯ್ಯ ಸರ್ಕಾರ ಈಗ ಎಚ್ಚೆತ್ತಂತೆ ವರ್ತಿಸುತ್ತಿದೆ, ತರಾತುರಿಯಲ್ಲಿ ಕಾಮಗಾರಿ ಮುಗಿಯದಿದ್ದರೂ ಚಾಲನೆ ನೀಡ್ತಿದ್ದಾರೆ, ಇದು ಚುನಾವಣೆ ಸಂದರ್ಭದಲ್ಲಿ ತುರಾತುರಿಯಲ್ಲಿ ಉದ್ಘಾಟನೆ ಮಾಡ್ತಿದ್ದಾರೆ, ಕಾಂಗ್ರೆಸ್‌’ನ ಎಲೆಕ್ಷನ್ ಗಿಮಿಕ್ ಎಂದು ಜನರಿಗೆ ಗೊತ್ತಾಗಲ್ವಾ? ಎಂದು ಈ ಸಂದರ್ಭದಲ್ಲಿ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಈ ವೇಳೆ ಆರ್. ಅಶೋಕ್ ರಸ್ತೆ ಪಕ್ಕದ ಹೋಟೆಲ್’ನಲ್ಲಿ ತಾವೇ ದೋಸೆ ಹಾಕಿದ್ದಾರೆ. ಮತ್ತೊಂದು ಕಡೆ ತಾವೇ ಬಟ್ಟೆಗೆ ಇಸ್ತ್ರಿ ಹಾಕಿದ್ದು ಜನರ ಗಮನ ಸೆಳೆಯಿತು.

loader