ವಿಶ್ವವಿದ್ಯಾಲಯಗಳು ನೀಡುವ ಗೌರವ ಡಾಕ್ಟರೆಟ್‌ಗಳ ಬಗ್ಗೆ ಇಂದು ನಾನಾ ಪ್ರಶ್ನೆಗಳು ಹುಟ್ಟುತ್ತಿವೆ. ನಿಷ್ಪಕ್ಷಪಾತವಾಗಿ ಅವುಗಳನ್ನು ನೀಡಲಾಗುತ್ತಿದೆಯೇ ಎಂದು ಕೂಡ ಅನೇಕ ಪ್ರಶ್ನೆಗಳು ಉದ್ಭವಿಸುತ್ತಿವೆ. ಇಂಥ ಸಂದರ್ಭದಲ್ಲಿ, 1997ರಿಂದ 2017ರವರೆಗೆ ದೇಶದ ಎಲ್ಲ ವಿವಿಗಳು ಯಾರಾರ‍ಯರಿಗೆ ಗೌರವ ಡಾಕ್ಟರೆಟ್‌ ನೀಡಿದವು ಎಂಬ ಪಟ್ಟಿಯು ಮಾಹಿತಿ ಹಕ್ಕಿನಲ್ಲಿ ದೊರಕಿದೆ.

ನವದೆಹಲಿ (ಫೆ.07): ವಿಶ್ವವಿದ್ಯಾಲಯಗಳು ನೀಡುವ ಗೌರವ ಡಾಕ್ಟರೆಟ್‌ಗಳ ಬಗ್ಗೆ ಇಂದು ನಾನಾ ಪ್ರಶ್ನೆಗಳು ಹುಟ್ಟುತ್ತಿವೆ. ನಿಷ್ಪಕ್ಷಪಾತವಾಗಿ ಅವುಗಳನ್ನು ನೀಡಲಾಗುತ್ತಿದೆಯೇ ಎಂದು ಕೂಡ ಅನೇಕ ಪ್ರಶ್ನೆಗಳು ಉದ್ಭವಿಸುತ್ತಿವೆ. ಇಂಥ ಸಂದರ್ಭದಲ್ಲಿ, 1997ರಿಂದ 2017ರವರೆಗೆ ದೇಶದ ಎಲ್ಲ ವಿವಿಗಳು ಯಾರಾರ‍ಯರಿಗೆ ಗೌರವ ಡಾಕ್ಟರೆಟ್‌ ನೀಡಿದವು ಎಂಬ ಪಟ್ಟಿಯು ಮಾಹಿತಿ ಹಕ್ಕಿನಲ್ಲಿ ದೊರಕಿದೆ.

ಮಾಹಿತಿ ಹಕ್ಕಿನ ಅಡಿ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆ ಈ ಪಟ್ಟಿಯನ್ನು ಪಡೆದಿದೆ. ಈ 20 ವರ್ಷದಲ್ಲಿ 160 ಸಾರ್ವಜನಿಕ ವಿಶ್ವವಿದ್ಯಾಲಯಗಳು ಹಾಗೂ ಸಂಸ್ಥೆಗಳು 2000 ಗೌರವ ಡಾಕ್ಟರೆಟ್‌ ನೀಡಿವೆ. 1400 ಮಂದಿ ಇಷ್ಟುಗೌರವಕ್ಕೆ ಭಾಜನರಾಗಿದ್ದಾರೆ.

ವಿಶೇಷವೆಂದರೆ ಆಯಕಟ್ಟಿನ ಪ್ರಮುಖ ಸ್ಥಾನಗಳಲ್ಲಿ ಅಧಿಕಾರದಲ್ಲಿದ್ದವರಿಗೆ ಹೆಚ್ಚು ಗೌರವ ಡಾಕ್ಟರೆಟ್‌ಗಳು ಒಲಿದುಬಂದಿವೆ. ಪ್ರಣಬ್‌ ಮುಖರ್ಜಿ ಹಾಗೂ ಪ್ರತಿಭಾ ಪಾಟೀಲ್‌ ಅವರು ರಾಷ್ಟ್ರಪತಿಗಳಾಗಿದ್ದಾಗ ಅವರಿಗೆ ತಲಾ 3 ಗೌರವ ಡಾಕ್ಟರೆಟ್‌ ದೊರಕಿವೆ.

ಇನ್ನೂ ವಿಶೇಷವೆಂದರೆ ಬೆಂಗಳೂರು ಐಐಎಸ್ಸಿ ನಿರ್ದೇಶಕರಾಗಿದ್ದ ವಿಜ್ಞಾನಿ ಗೋವರ್ಧನ ಮೆಹ್ತಾ ಅವರು ವಿಶ್ವವಿದ್ಯಾಲಯಗಳ ನ್ಯಾಕ್‌ ಸಮಿತಿ ಮುಖ್ಯಸ್ಥರಾಗಿ 2006ರಿಂದ 2012ರವರೆಗೆ ಕಾರ್ಯನಿರ್ವಹಿಸಿದ್ದರು. ಈ 6 ವರ್ಷ ಅವಧಿಯಲ್ಲಿ ಅವರಿಗೆ ಕರ್ನಾಟಕದ ಮೈಸೂರು ವಿಶ್ವವಿದ್ಯಾಲಯ, ಧಾರವಾಡದ ಕರ್ನಾಟಕ ವಿವಿ, ಮೈಸೂರಿನ ಕರ್ನಾಟಕ ಮುಕ್ತ ವಿವಿ ಹಾಗೂ ಕಲಬುರಗಿಯ ಕೇಂದ್ರೀಯ ವಿವಿಗಳು ಸೇರಿದಂತೆ ದೇಶದ 18 ವಿವಿಗಳು ಗೌರವ ಡಾಕ್ಟರೆಟ್‌ ನೀಡಿವೆ. ಇದು ಸ್ವಜನಪಕ್ಷಪಾತ ಹಾಗೂ ತಮ್ಮ ಬಾಸ್‌ಗಳ ಓಲೈಕೆಯ ಪ್ರಶ್ನೆಗಳನ್ನು ಹುಟ್ಟುಹಾಕಿವೆ.