ಬಳ್ಳಾರಿ(ಅ.15): ಮೇಕೆ ಮರಿಯನ್ನು ನುಂಗಲು ಹೋದ ಹೆಬ್ಬಾವೇ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಹೊಸಪೇಟೆ ತಾಲೂಕಿನ  ಪೋತಲಕಟ್ಟೆ ಗ್ರಾಮದಲ್ಲಿ ಕಾಣಿಸಿಕೊಂಡ ಹೆಬ್ಬಾವು ಮೇಕೆ ಮರಿಯನ್ನು ನುಂಗಲು ಮುಂದಾಗಿದೆ.  ಈ ವೇಳೆ  ಮೇಕೆ ಮರಿ ಸತ್ತಿದೆ. ಆದರೆ ಅದನ್ನು ಜೀರ್ಣಿಸಿಕೊಳ್ಳಲು ಆಗದೇ ಹೆಬ್ಬಾವು ಒದ್ದಾಡುತ್ತಿರುವುದನ್ನು ನೋಡಿದ ಗ್ರಾಮಸ್ಥರು, ಕಲ್ಲಿನಿಂದ ಹೊಡೆದು ಸಾಯಿಸಿದ್ದಾರೆ.