ಮೀನಿಗಾಗಿ ಹಾಕಿದದ್ದ ಬಲೆಯಲ್ಲಿ ಸಿಕ್ಕಿದ್ದು ಮೀನಲ್ಲ,ಮತ್ತೇನು?

First Published 6, Jun 2018, 6:19 PM IST
Python Caught In Fishing Net in Shivamoga
Highlights

ಮಳೆಗಾಲ ಬಂದರೆ ಸಾಕು, ನದಿ, ಹಳ್ಳ, ಕೆರೆಗಳಿರೋ ಹಳ್ಳಿಗಳಲ್ಲಿ ಮೀನು ಹಿಡಿಯುವುದು ಸಾಮಾನ್ಯ. ಶಿವಮೊಗ್ಗದ ಆಲ್ಕೊಳದಲ್ಲಿ ಇದೇ ರೀತಿ ಕೆರೆಯಲ್ಲಿ ಮೀನಿಗಾಗಿ ಬಲೆ ಹಾಕಲಾಗಿತ್ತು. ಮೀನಿನ ಆಸೆಯಿಂದ ಕೆರೆಗಿಳಿದಾಗಿ ಅಚ್ಚರಿ ಕಾದಿತ್ತು.

ಶಿವಮೊಗ್ಗ(ಜೂನ್.6): ಮಳೆಗಾಲದಲ್ಲಿ ಸಿಗೋ ಮೀನು ಬಹಳ ರುಚಿಕರ. ಇದಕ್ಕಾಗಿ ಹಳ್ಳಿಗಳಲ್ಲಿ ಮೀನಿಗಾಗಿ ಬಲೆ ಬೀಸೋದು ಸಾಮಾನ್ಯ. ಇದೇ ರೀತಿ ಮೀನಿನ ಆಸೆಯಿಂದ ಶಿವಮೊಗ್ಗದ ಆಲ್ಕೊಳದಲ್ಲಿ ಮೀನಿಗಾಗಿ ವ್ಯಕ್ತಿಯೊಬ್ಬರು ಬಲೆ ಹಾಕಿದ್ದರು. ಆದರೆ ಬಲೆಯಲ್ಲಿ ಸಿಕ್ಕಿದ್ದು ಮೀನಲ್ಲ 6 ಅಡಿ ಗಾತ್ರದ ಹೆಬ್ಬಾವು.

ಕೆರೆಯಲ್ಲಿ ಮೀನಿಗಾಗಿ ಅಲ್ಕೊಳ ಗ್ರಾಮದ ರೈತ ಬಲೆ ಬೀಸಿದ್ದರು. ಮರುದಿನ ಬೆಳಗ್ಗೆ ಬಲೆಯಲ್ಲಿ ಸಿಕ್ಕಿರೋ ಮೀನುಗಳನ್ನ ತೆಗೆಯಲು ಕೆರೆಗೆ ಇಳಿದಾಗ ಅಚ್ಚರಿ ಕಾದಿತ್ತು. ಮೀನಿನ ಬದಲು 6 ಅಡಿ ಗಾತ್ರದ ಹೆಬ್ಬಾವು ಸಿಕ್ಕಿಹಾಕಿಕೊಂಡಿತ್ತು.

ತಕ್ಷಣವೇ ಉರಗ ತಜ್ಞ ಸ್ನೇಕ್ ಕಿರಣ್ ಗೆ ಮಾಹಿತಿ ನೀಡಿದ್ದಾರೆ. ಕೆರೆಯ ಬಳಿ ಬಂದ  ಸ್ನೇಕ್ ಕಿರಣ್  ಹೆಬ್ಬಾವನ್ನ ಬಲೆಯಿಂದ ಹೊರಗೆ ತೆಗೆದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. 
 

loader