ಪುತ್ತೂರು ವಿವೇಕಾನಂದ ಸಂಸ್ಥೆಯಿಂದ ಸಂತ್ರಸ್ತರಿಗೆ ಉಚಿತ ಶಿಕ್ಷಣ
ಕೊಡಗು ಸಂತ್ರಸ್ತ ಮಕ್ಕಳ ನೆರವಿಗೆ ಧಾವಿಸಿರುವ ವಿವೇಕಾನಂದ ವಿದ್ಯಾವರ್ಧಕ ಸಂಘ ಮಾದರಿ ಕೆಲಸವೊಂದಕ್ಕೆ ಮುಂದಾಗಿದೆ. ಸಂತ್ರಸ್ತ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ತೀರ್ಮಾನ ಮಾಡಿದೆ.
ಪುತ್ತೂರು(ಆ.23] ಕೊಡಗು ಸಂತ್ರಸ್ತರಿಗೆ ಆರ್ಥಿಕ ಸಹಾಯ, ದೈನಂದಿನ ಆಹಾರ ಪೂರೈಕೆ ಮಾಡಲು ಸಂಸ್ಥೆ ಹೆಜ್ಜೆ ಇಟ್ಟಿದೆ. ಸಂಸ್ಥೆ ಪ್ರಾಥಮಿಕ ಶಾಲೆಗಳಿಂದ ತೊಡಗಿ ಪಿಯುಸಿ, ಪದವಿ, ಇಂಜಿನಿಯರಿಂಗ್, ಕಾನೂನು, ಬಿ.ಎಡ್, ಎಂಬಿಎ, ಪಾಲಿಟಿಕ್ನಿಕ್ ಸೇರಿದಂತೆ ಎಲ್ಲ ರೀತಿಯ ಅಧ್ಯಯನಕ್ಕೆ ಅವಕಾಶ ಮಾಡಿಕೊಡುತ್ತಾ ಬಂದಿದೆ.
ಪ್ರವಾಹ ಸಂತ್ರಸ್ತರಾಗಿ ಸಂಕಷ್ಟಕ್ಕೆ ಸಿಲುಕಿರುವ ಮಕ್ಕಳಿಗೆ ಮುಂದಿನ ಒಂದು ವರ್ಷ ಕಾಲ ಉಚಿತ ವಸತಿ ಮತ್ತು ಶಿಕ್ಷಣ ನೀಡಲು ಸಂಸ್ಥೆ ತೀರ್ಮಾನ ಮಾಡಿದೆ. ಒಂದು ವೇಳೆ ಪದವಿಯ ದ್ವಿತೀಯ ವರ್ಷದಲ್ಲಿದ್ದರೂ ದಾಖಲೆ ಮಾಡಿಕೊಳ್ಳಲು ಸಂಸ್ಥೆ ಮುಂದಾಗಿದೆ. ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಒಂದು ಮಟ್ಟಿನ ಆರ್ಥಿಕ ಸಹಾಯ ಮಾಡಿದ್ದು ಇದೀಗ ಶಿಕ್ಷಣಕ್ಕೆ ಅವಕಾಶ ಮಾಡಿಕೊಡುತ್ತಿದೆ.
ಮಳೆ ಬಂದರೆ ಕೊಡಗು, ದಕ್ಷಿಣ ಕನ್ನಡದಲ್ಲಿ ಭೂಮಿ ಏಕೆ ಕುಸಿಯುತ್ತೆ?
ಹೆಚ್ಚಿನ ಮಾಹಿತಿಗೆ:
ಲಕ್ಷ್ಮೀ ಪ್ರಸಾದ್ - 9972420885
ವೆಂಕಟೇಶ್ - 9731774703
ರಘುರಾಜ್ ಉಬರಡ್ಕ - 9449061223
"ವಿವೇಕಾನಂದ " ವಿದ್ಯಾವರ್ಧಕ ಸಂಘದ ಕಛೇರಿ - 08251236599
ವೆಬ್ ಸೈಟ್ : www.vivekanandaedu.org