ನಾನು 2 ವರ್ಷಕ್ಕೆ ಮಾತ್ರ ಸಚಿವ : ಕಾಂಗ್ರೆಸ್ ಮುಖಂಡ

First Published 19, Jun 2018, 12:51 PM IST
Puttarangashetty Quite Minister Post After 2 year
Highlights

ನಾನು ಇನ್ನೂ ಎರಡು ವರ್ಷ ಮಾತ್ರ ಸಚಿವನಾಗಿರುವೆ.  ಎರಡು ವರ್ಷದ ನಂತರ ಹನೂರು  ಶಾಸಕ ಆರ್. ನರೇಂದ್ರ ಸಚಿವ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂದು  ಚಾಮರಾಜನಗರದಲ್ಲಿ ಸಚಿವ ಸಿ. ಪುಟ್ಟರಂಗಶೆಟ್ಟಿ ಹೇಳಿದ್ದಾರೆ.

 

ಚಾಮರಾಜನಗರ : ನಾನು ಇನ್ನೂ ಎರಡು ವರ್ಷ ಮಾತ್ರ ಸಚಿವನಾಗಿರುವೆ.  ಎರಡು ವರ್ಷದ ನಂತರ ಹನೂರು  ಶಾಸಕ ಆರ್. ನರೇಂದ್ರ ಸಚಿವ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂದು  ಚಾಮರಾಜನಗರದಲ್ಲಿ ಸಚಿವ ಸಿ. ಪುಟ್ಟರಂಗಶೆಟ್ಟಿ ಹೇಳಿದ್ದಾರೆ.

ಚಾಮರಾಜನಗರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂವಾದ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗ ಶೆಟ್ಟಿ ಈ ಹೇಳಿಕೆ ನೀಡಿದ್ದಾರೆ. 

ಮಾಜಿ ಸಿಎಂ ಸಿದ್ದರಾಮಯ್ಯ ಎರಡು ವರ್ಷದ ನಂತರ ಸಚಿವ ಸ್ಥಾನ ಬಿಡಬೇಕು ಎಂದಿದ್ದಾರೆ. ನೀನು ಎರಡು ವರ್ಷ ಮಾತ್ರ ಮಂತ್ರಿಯಾಗಿ ನಂತರ ಸ್ಥಾನ ತ್ಯಜಿಸಬೇಕು ಎಂದು ಈ ಮೊದಲೇ ಅವರು ತಿಳಿಸಿದ್ದಾರೆ. ಅದರಂತೆ ಎರಡು ವರ್ಷ ಆದಮೇಲೆ  ನರೇಂದ್ರಗೆ ಮಂತ್ರಿ ಸ್ಥಾನ ಬಿಟ್ಟುಕೊಡುತ್ತೇನೆ ಎಂದರು.

loader