ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯಲು ಕೆಲವೇ ಗಂಟೆಗಳು ಬಾಕಿಯಿರುವಾಗ ಸಚಿವ ಸಿ.ಎಸ್. ಪುಟ್ಟರಾಜು ಗಳಗಳನೆ ಅತ್ತು ತಮ್ಮ ದುಃಖ ಹೊರಹಾಕಿದ್ದಾರೆ. 

ಮಂಡ್ಯ: ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯಲು ಕೆಲವೇ ಗಂಟೆಗಳು ಬಾಕಿಯಿರುವಾಗ ಸಚಿವ ಸಿ.ಎಸ್. ಪುಟ್ಟರಾಜು ದುಃಖ ತಡೆಯಲಾರದೆ ಗಳಗಳನೆ ಅತ್ತರು. 

ಸರ್ ಎಂ.ವಿ. ಕ್ರೀಡಾಂಗಣಕ್ಕೆ ಭಾನುವಾರ ಸಂಜೆಯಿಂದ ಸೋಮವಾರ ಬೆಳಗ್ಗೆವರೆಗೂ ಅಂಬರೀಷ್ ಪಾರ್ಥಿವ ಶರೀರ ನೋಡಲು ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದ ಜನರನ್ನು ಸಚಿವ ಸಿ.ಎಸ್.ಪುಟ್ಟರಾಜು ನಿಯಂತ್ರಿಸುತ್ತಿದ್ದರು. 

ಅಂಬಿ ಪಾರ್ಥಿವ ಶರೀರವನ್ನು ಕೊಂಡೊಯ್ಯಲು ಕೆಲವೇ ಗಂಟೆಗಳು ಬಾಕಿಯಿರುವಾಗ ಅಭಿಮಾನಿಗಳನ್ನು ನಿಯಂತ್ರಿಸುವ ವೇಳೆ ಭಾವಪರವಶರಾದ ಪುಟ್ಟರಾಜು, ತನ್ನ ನೆಚ್ಚಿನ ಗೆಳೆಯನನ್ನ ಕಳೆದುಕೊಳ್ಳುತ್ತಿದ್ದೇನೆ ಎಂದು ನೆನೆದು ಗಳಗಳನೆ ಕಣ್ಣೀರು ಹಾಕಿದರು.