Asianet Suvarna News Asianet Suvarna News

ಶ್ರೀಲಂಕಾ ಬಾಂಬ್ ಸ್ಫೋಟ: ಸಾವು ಬದುಕಿನ ನಡುವೆ ಮತ್ತೊಬ್ಬ ಕನ್ನಡಿಗನ ಹೋರಾಟ

ಶ್ರೀಲಂಕಾದಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ| ಸಾವು ಬದುಕಿನ ನಡುವೆ ಹೋರಾಡ್ತಿರುವ ಮತ್ತೊಬ್ಬ ಕನ್ನಡಿಗ| ಮೃತ ನಾಗರಾಜ್ ರೆಡ್ಡಿ ಜೊತೆಗೆ ಬಿಸಿನೆಸ್ ಟೂರ್ ಗೆ ತೆರಳಿದ್ದ ಪುರುಷೋತ್ತಮ್ ರೆಡ್ಡಿ| ಪುರುಷೋತ್ತಮ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಶ್ರೀಲಂಕಾದಲ್ಲಿರುವ ರಾಯಭಾರಿ ಕಚೇರಿ

Purushottam Reddy Seriously Injured In Sri Lanka Bomb Blast
Author
Bangalore, First Published Apr 24, 2019, 12:54 PM IST

ಕೊಲಂಬೋ[ಏ.24]: ಶ್ರೀಲಂಕಾದಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಮತ್ತೊಬ್ಬ ಕನ್ನಡಿಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮೃತ ನಾಗರಾಜ್ ರೆಡ್ಡಿ ಜೊತೆಗೆ ಬಿಸಿನೆಸ್ ಟೂರ್ ಗೆ ಪುರುಷೋತ್ತಮ್ ರೆಡ್ಡಿ ಕುರಿತಾಗಿ ಮಾಹಿತಿ ನೀಡಿ ಎಂದು ಅವರ ಸ್ನೇಹಿತ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ  ಶ್ರೀಲಂಕಾದಲ್ಲಿರುವ  ರಾಯಭಾರಿ ಕಚೇರಿ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದೆ.  

ಶ್ರೀಲಂಕಾದಲ್ಲಿರುವ  ರಾಯಭಾರಿ ಕಚೇರಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, ಸದ್ಯಕ್ಕೆ ಪುರುಷೋತ್ತಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುರುಷೋತ್ತಮ್ ಜೊತೆ ಅವರ ಕುಟುಂಬದ ಸದಸ್ಯರು ಕೂಡ ಇದ್ದಾರೆ ಎಂದು ಮಾಹಿತಿ ನೀಡಿದೆ. 

ನಾಗರಾಜ್ ರೆಡ್ಡಿ, ಪುರುಷೋತ್ತಮ್ ರೆಡ್ಡಿ ಸೇರಿ ಒಟ್ಟು 4 ಮಂದಿ ವ್ಯಾಪಾರದ ವಿಚಾರವಾಗಿ ಶ್ರೀಲಂಕಾಗೆ ತೆರಳಿದ್ದರು. ಸ್ಫೋಟ ನಡೆದಾಗ ಇಬ್ಬರು ಹೋಟೆಲ್ ಕೊಠಡಿಯಲ್ಲಿ ಉಳಿದುಕೊಂಡಿದ್ದರೆ ಉಳಿದಿಬ್ಬರು ತಿಂಡಿಗೆ ಬಂದಿದ್ದರು. ಈ ವೇಳೆ ಸ್ಫೋಟ ,ಸಂಭವಿಸಿದ್ದು, ತಿಂಡಿ ತಿನ್ನಲು ಬಂದಿದ್ದ ನಾಗರಾಜ್ ರೆಡ್ಡಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. 

ಶ್ರೀಲಂಕಾದಲ್ಲ ಸರಣಿ ಬಾಂಬ್ ಸ್ಪೋಟ ಪ್ರಕರಣದ ಕುರಿತಾಗಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸುತ್ತಾ ಬಾಂಬ್ ಬ್ಲಾಸ್ಟ್ ವೇಳೆ ಮೃತ ನಾಗರಾಜ್ ರೆಡ್ಡಿ ಜೊತೆಗಿದ್ದ ಪುರುಷೋತ್ತಮ್ ರೆಡ್ಡಿಗೆ ಸದ್ಯ ಶ್ರೀಲಂಕಾದ ಕೊಲೊಂಬೊದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಏರ್ ಆಂಬ್ಯುಲೆನ್ಸ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡುತ್ತೇವೆ. ದೇಹಕ್ಕೆ ಹೊಕ್ಕಿರುವ ಗಾಜಿನ ಚೂರು, ಕಬ್ಬಿಣದ ಚೂರನ್ನ ಹೊರತೆಗೆಯಬೇಕಿದೆ. ಘಟನೆ ನಡೆದ 20 ನಿಮಿಷದಲ್ಲಿ ಪುರುಷೋತ್ತಮ್ ರನ್ನ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ತಕ್ಷಣವೇ ಚಿಕಿತ್ಸೆ ದೊರೆತಿದ್ರಿಂದ ಪುರುಷೋತ್ತಮ್ ಬದುಕುಳಿದಿದ್ದಾರೆ ಎಂದಿದ್ದಾರೆ.

Follow Us:
Download App:
  • android
  • ios