Asianet Suvarna News Asianet Suvarna News

ಮಹಿಳಾ ಪೊಲೀಸ್'ಗೆ ಯುವತಿಯ ಮೇಲೆ ಅರಳಿದ ಪ್ರೇಮ: ಕುಟುಂಬಸ್ಥರ ಸಮ್ಮತಿಯೊಂದಿಗೆ ಅದ್ಧೂರಿ ಮದುವೆ!

ಯುವತಿಯೊಬ್ಬಳು ಯುವತಿಯೊಂದಿಗೇ ಮದುವೆಯಾದ ಘಟನೆ ಪಂಜಾಬ್'ನಲ್ಲಿ ನಡೆದಿದೆ. ಅಚ್ಚರಿಪಡಿಸುವ ವಿಚಾರವೆಂದರೆ ಈ ಸಲಿಂಗಿಗಳ ವಿವಾಹ ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ನಡೆದಿದೆ. ಈ ಮದುವೆಯಲ್ಲಿ ಗಂಡಾಗಿದ್ದು, ಪಂಜಾಬ್ ಪೊಲೀಸ್'ನಲ್ಲಿ ASI ಆಗಿ ಕಾರ್ಯ ನಿರ್ವಹಿಸುತ್ತಿರುವ ಮಂಜೀತ್ ಎಂಬ ಯುವತಿ. ಅದ್ಧೂರಿಯಾಗಿ ಮದುವೆ ನಡೆಯಿತಾದರೂ ಇವರಿಬ್ಬರ ಪ್ರೇಮದ ವಿಚಾರವಾಗಿ ಪ್ರಶ್ನಿಸಿದವರಿಗೆ ಮಾತ್ರ ಯಾವುದೇ ಉತ್ತರ ಸಿಕ್ಕಿಲ್ಲ.

punjab police goes for same sex marriage
  • Facebook
  • Twitter
  • Whatsapp

ಜಲಂಧರ್(ಎ. 23): ಯುವತಿಯೊಬ್ಬಳು ಯುವತಿಯೊಂದಿಗೇ ಮದುವೆಯಾದ ಘಟನೆ ಪಂಜಾಬ್'ನಲ್ಲಿ ನಡೆದಿದೆ. ಅಚ್ಚರಿಪಡಿಸುವ ವಿಚಾರವೆಂದರೆ ಈ ಸಲಿಂಗಿಗಳ ವಿವಾಹ ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ನಡೆದಿದೆ. ಈ ಮದುವೆಯಲ್ಲಿ ಗಂಡಾಗಿದ್ದು, ಪಂಜಾಬ್ ಪೊಲೀಸ್'ನಲ್ಲಿ ASI ಆಗಿ ಕಾರ್ಯ ನಿರ್ವಹಿಸುತ್ತಿರುವ ಮಂಜೀತ್ ಎಂಬ ಯುವತಿ. ಅದ್ಧೂರಿಯಾಗಿ ಮದುವೆ ನಡೆಯಿತಾದರೂ ಇವರಿಬ್ಬರ ಪ್ರೇಮದ ವಿಚಾರವಾಗಿ ಪ್ರಶ್ನಿಸಿದವರಿಗೆ ಮಾತ್ರ ಯಾವುದೇ ಉತ್ತರ ಸಿಕ್ಕಿಲ್ಲ.

ದ ಟ್ರಿಬ್ಯೂನ್ ಎಂಬ ವೆಬ್'ಸೈಟ್ ಈ ಸುದ್ದಿಯನ್ನು ಬಿತ್ತರಿಸಿದ್ದು, ಪಂಜಾಬ್'ನಲ್ಲಿ ನಡೆದ ಈ ಅದ್ಧೂರಿ ಮದುವೆಯಲ್ಲಿ ಬಂಧು ಮಿತ್ರರೆಲ್ಲರೂ ಶಾಮೀಲಾಗಿದ್ದರು ಎಂದು ತಿಳಿಸಿದೆ. ಇನ್ನು ಮಂಜೀತ್ ತನ್ನ ಪದವಿ ಮುಗಿಸಿದ ಬಳಿಕ ಪೊಲೀಸ್ ಇಲಾಖೆಗೆ ಸೇರಿದ್ದಳು ಹಾಗೂ ತನ್ನ ಉತ್ತಮ ನಡತೆಯಿಂದ ASI ಹುದ್ದೆಗೆ ಭರ್ತಿ ಪಡೆದಿರುವುದಾಗಿಯೂ ತಿಳಿದು ಬಂದಿದೆ.

 

Follow Us:
Download App:
  • android
  • ios