ಪಂಜಾಬ್ ಮತ್ತು ಉತ್ತರಪ್ರದೇಶದಲ್ಲಿ ಇಂದು ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದೆ. 1 ಗಂಟೆವರೆಗೆ ಗೋವಾದಲ್ಲಿ ಶೇ. 53 ರಷ್ಟು ಮತದಾನವಾಗಿದ್ದು, ಪಂಜಾಬ್ ನಲ್ಲಿ ಶೇ. 37 ರಷ್ಟು ಮತದಾನವಾಗಿದೆ.
ನವದೆಹಲಿ (ಫೆ.04): ಪಂಜಾಬ್ ಮತ್ತು ಉತ್ತರಪ್ರದೇಶದಲ್ಲಿ ಇಂದು ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದೆ. 1 ಗಂಟೆವರೆಗೆ ಗೋವಾದಲ್ಲಿ ಶೇ. 53 ರಷ್ಟು ಮತದಾನವಾಗಿದ್ದು, ಪಂಜಾಬ್ ನಲ್ಲಿ ಶೇ. 37 ರಷ್ಟು ಮತದಾನವಾಗಿದೆ.
ಅರವಿಂದ್ ಕೇಜ್ರಿವಾಲ್ ನೇತೃತ್ಚದ ಆಪ್ ಪಕ್ಷ ಉಭಯ ರಾಜ್ಯಗಳಲ್ಲೂ ಮೊದಲ ಬಾರಿ ಸ್ಪರ್ಧಿಸುತ್ತಿದೆ.
ಪಂಜಾಬ್ ನಲ್ಲಿ 117, ಗೋವಾದಲ್ಲಿ 40 ವಿಧಾನಸಭಾ ಸ್ಥಾನಗಳಿವೆ.
ಮತದಾನ ಮಾಡಲು ಕ್ಯೂನಲ್ಲಿ ನಿಂತಿದ್ದಾಗ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಗೋವಾದಲ್ಲಿ ನಡೆದಿದೆ. ಮೃತರು ಡಾ. ಲೆಸ್ಲಿ ಸಾಲ್ದಾನ ಎಂದು ತಿಳಿದು ಬಂದಿದೆ. ಇವರು ನಿವೃತ್ತ ಆರೋಗ್ಯ ಅಧಿಕಾರಿ ಎನ್ನಲಾಗಿದೆ.
