ಪುಣೆ[ಜು. 18] ಟ್ರಾಫಿಕ್ ನಿಯಮ ಪಾಲನೆಗೆ ಉತ್ತೇಜನ ನೀಡಲು ಪುಣೆ ಟ್ರಾಫಿಕ್ ಪೊಲೀಸರು ಅದ್ಭುತ ಐಡಿಯಾ ಮಾಡಿದ್ದಾರೆ. ಆನ್ ಲೈನ್ ಆಹಾರ ಸರಬರಾಜಿನಲ್ಲಿ ಹೆಸರು ಮಾಡಿರುವ ಜೋಮ್ಯಾಟೋ ಮತ್ತು ಸ್ವಿಗ್ಗಿ ಜತೆ ಟ್ರಾಫಿಕ್ ಪೊಲೀಸರು ಒಪ್ಪಂದವೊಂದನ್ನು ಮಾಡಿಕೊಂಡಿದ್ದಾರೆ.

ಏನಿದು ಯೋಜನೆ:? ಸವಾರರು ಅಥವಾ ಗ್ರಾಹಕರು 10 ಅಂಕಿಯ ಕೋಡ್ ಮೂಲಕ ಸ್ವಿಗ್ಗಿ ಮತ್ತು ಜೋಮ್ಯಾಟೋ ಆರ್ಡರ್ ಗಳ ಮೇಲೆ ಇನ್ನೂ ಹೆಚ್ಚಿನ ರಿಯಾಯಿತಿ ಪಡೆದುಕೊಳ್ಳಬಹುದುದು. ಪೊಲೀಸರು ನಿಲ್ಲಿಸಿ ಕೇಳಿದಾಗ ಸವಾರನ ಮಾಹಿತಿ ಕ್ಲೀನ್ ಆಗಿದ್ದರೆ ಅಂದರೆ ಯಾವುದೇ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಪ್ರಕರಣ ಇಲ್ಲವಾದರೆ 10 ಡಿಜಿಟ್ ನ ಕೂಪನ್ ಒಂದನ್ನು ನೀಡಲಾಗುತ್ತದೆ.

53 ಬಾರಿ ನಿಯಮ ಉಲ್ಲಂಘಿಸಿದ ಬೆಂಗಳೂರು ಫುಡ್ ಡೆಲಿವರಿ ಬಾಯ್!

ಈಗಾಗಲೇ ಈ ಬಗೆಯಲ್ಲಿ 10 ಸಾವಿರ ಕೂಪನ್ ನೀಡಲಾಗಿದ್ದು ಜನಸ್ಪಂದನೆ ವ್ಯಕ್ತವಾಗುತ್ತಿದೆ. ಇದು ಮಾತ್ರವಲ್ಲದೇ  ಎಲೆಕ್ಟ್ರಾನಿಕ್, ಬಟ್ಟೆ ಅಂಗಡಿ, ಮಾಲ್ ಗಳೊಂದಿಗೂ ಪೊಲೀಸ್ ಇಲಾಖೆ ಟೈ ಅಪ್ ಮಾಡಿಕೊಂಡಿದೆ.

ಈ ಯೋಜನೆಗೆ ಜನರಿಂದ ಅಥವಾ ಸಂಸ್ಥೆಗಳಿಂದ ಹಣ ತೆಗೆದುಕೊಳ್ಳಲಾಗಿಲ್ಲ. ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವವರು ಕಟ್ಟುವ ದಂಡ ನೇರವಾಗಿ ಖಜಾನೆಗೆ ಹೋಗುತ್ತಿದೆ  ಎಂದು ಇಲಾಖೆ ಸ್ಪಷ್ಟನೆ ನೀಡಿದೆ.