ವಿದ್ಯಾರ್ಥಿನಿಯರ ಒಳಉಡುಪು ಹೀಗೆ ಇರಬೇಕು..ಇದೆಂಥ ಆದೇಶ!

Pune school issues diktat on girl students' innerwear colour, says 'intentions are pure'
Highlights

ಪುಣೆಯ ವಿದ್ಯಾಲಯವೊಂದು ನೀಡಿದ ಪ್ರಕಟಣೆ  ಇದೀಗ ದೊಡ್ಡ ವಿವಾದ ಹುಟ್ಟುಹಾಕಿದೆ. ಹಾಗಾದರೆ ವಿದ್ಯಾಲಯ ನೀಡಿದ ಪ್ರಕಟಣೆಯಾದರೂ ಏನು? 

ಪುಣೆ[ಜು.4]  ಪುಣೆಯ ವಿಶ್ವಶಾಂತಿ ಗುರುಕುಲ ವಿದ್ಯಾಲಯ ತನ್ನ ವಿದ್ಯಾರ್ಥಿನಿಯರು ತೊಡುವ ಒಳ ಉಡುಪು ಇಂಥದ್ದೆ ಬಣ್ಣದ್ದಾಗಿರಬೇಕು ಎಂದು ಹೇಳಿ ಎಡವಟ್ಟು ಮಾಡಿಕೊಂಡಿದೆ. 

ವಿದ್ಯಾರ್ಥಿನಿಯರು ತೊಡುವ ಒಳ ಉಡುಪು ಬಿಳಿ ಅಥವಾ ಚರ್ಮದ ಬಣ್ಣದ್ದಾಗಿರಬೇಕು ಎಂಬ ಸೂಚನೆಯನ್ನು ಆಡಳಿತ ವರ್ಗ ಹೇಳಿದೆ. ತನ್ನ ಹೇಳಿಕೆಯನ್ನು ಹೊಸ ಶೈಕ್ಷಣಿಕ ವರ್ಷದ ಶಾಲಾ ಡೈರಿಯಲ್ಲಿ ಪ್ರಕಟಿಸಿದೆ.

ಶಾಲಾ ಡೈರಿಯಲ್ಲಿನ ಈ ನಿಬಂಧನೆಗೆ ಸಹಿ ಹಾಕಲು ಒತ್ತಾಯಿಸಲಾಗಿದೆ. ನಿಬಂಧನೆಗಳನ್ನು ಒಪ್ಪಿಕೊಳ್ಳಲೇಬೇಕು ಎಂದು ಆಡಳಿತ ಮಂಡಳಿ ಒತ್ತಾಯಿಸಿದ್ದಕ್ಕೆ ಪ್ರತಿಭಟನೆಯೂ ನಡೆದಿದೆ. ಅಲ್ಲದೇ ವಿದ್ಯಾರ್ಥಿನಿಯರು ನೀರು ಕುಡಿಯಲು ಜತೆಗೆ ಟಾಯ್ಲೆಟ್ ಗೆ ತೆರಳಲು ಸಮಯ ನಿಗದಿ ಮಾಡಿದ್ದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.(ಸಾಂದರ್ಭಿಕ ಚಿತ್ರ]

loader