66 ವರ್ಷಗಳ ಬಳಿಕ ಉಗುರು ಕತ್ತರಿಸಲಿರುವ ಅಜ್ಜವಿಶ್ವದ ಅತ್ಯಂತ ಉದ್ದದ ಉಗುರು ಹೊಂದಿರುವ ಹೆಗ್ಗಳಿಕೆಗಿನ್ನೀಸ್ ದಾಖಲೆ ಬರೆದಿರುವ ಪುಣೆಯ ಶ್ರೀಧರ್ ಚಿಲ್ಲಲ್ಟೈಮ್ಸ್ ಸ್ಕ್ವೆರ್‌ನಲ್ಲಿ ಉಗುರು ಕತ್ತರಿಸುವ ಸಮಾರಂಭಶ್ರೀಧರ್ ಉಗುರುಗಳನ್ನು ಸಂರಕ್ಷಿಸಲಿದೆ ಸಂಸ್ಥೆ
ಪುಣೆ(ಜು.11): ವಿಶ್ವದ ಅತ್ಯಂತ ಉದ್ದದ ಉಗುರು ಹೊಂದಿರುವ ಮನುಷ್ಯ ಎಂಬ ಖ್ಯಾತಿಗೆ ಪಾತ್ರವಾಗಿರುವ ಪುಣೆಯ ಶ್ರೀಧರ್ ಚಿಲ್ಲಲ್, ಕೊನೆಗೂ ತಮ್ಮ ಉದ್ದದ ಉಗುರುಗಳನ್ನು ಕಟ್ ಮಾಡಲು ನಿರ್ಧರಿಸಿದ್ದಾರೆ. ವಿಶ್ವದ ಅತ್ಯಂತ ಉದ್ದದ ಉಗುರು ಹೊಂದಿರುವ ಮನುಷ್ಯ ಎಂದು 66 ವಷರ್ಷದ ಶ್ರೀಧರ್ ಚಿಲ್ಲಲ್ ಈಗಾಗಲೇ ಗಿನ್ನೀಸ್ ಬುಕ್ ನಲ್ಲಿ ತಮ್ಮ ಹೆಸರು ನೊಂದಾಯಿಸಿಕೊಂಡಿದ್ದಾರೆ.
ಶ್ರೀಧರ್ ತಮ್ಮ ಎಡಗೈಯನ್ನು ಎದೆ ಭಾಗದ ಮೇಲೆ ಇಟ್ಟುಕೊಂಡರೂ, ಅವರ ಉಗುರುಗಳು ನೆಲಕ್ಕೆ ಮುಟ್ಟುತ್ತವೆ. ಶ್ರೀಧರ್ 1952 ರಿಂದ ತಮ್ಮ ಎಡಗೈ ಬೆರಳಿನ ಉಗುರುಗಳನ್ನು ಕಟ್ ಮಾಡಿಲ್ಲ. ಆದರೆ ಗಿನ್ನೀಸ್ ದಾಖಲೆ ಬರೆದ ಬಳಿಕ ಶ್ರೀಧರ್ ತಮ್ಮ ಉದ್ದನೆಯ ಉಗುರುಗಳನ್ನು ಕಟ್ ಮಾಡಲು ನಿರ್ಧರಿಸಿದ್ದಾರೆ.
ಶ್ರೀಧರ್ ಅವರಿಗೆ ಸದ್ಯ 66 ವಷರ್ಷವಾಗಿದ್ದು, ಈ ಉಗುರುಗಳ ಭಾರ ಹೊರಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ತಮ್ಮ ಉಗುರುಗಳನ್ನು ಕಟ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಶ್ರೀಧರ್.
ಇನ್ನು ಶ್ರೀಧರ್ ಅವರು ತಮ್ಮ ಉಗರು ಕಟ್ ಮಾಡಲು ಅಮೆರಿಕಕ್ಕೆ ತೆರಳುತ್ತಿದ್ದು, ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೆರ್ ನ ಮ್ಯೂಸಿಯಂನಲ್ಲಿ ಎಲ್ಲರ ಸಮ್ಮುಖದಲ್ಲಿ ಶ್ರೀಧರ್ ಅವರ ಉಗುರುಗಳನ್ನು ಕತ್ತರಿಸಲಾಗುತ್ತದೆ. ಬಳಿಕ ರಿಪ್ಲೇಯ ಬಿಲಿವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ ಶ್ರೀಧರ್ ಅವರ ಉಗುರುಗಳನ್ನು ಸಂರಕ್ಷಿಸಿ ಇಡಲಾಗುತ್ತದೆ.
