ಪುಣೆ : ಸೆಕ್ಸ್ ಗಾಗಿ ಒತ್ತಾಯಿಸಿದ ಸಲಿಂಗಕಾಮಿಯ ಮೇಲೆ ಸಂಗಾತಿಯೇ ಹಲ್ಲೆ ಮಾಡಿದ ಘಟನೆ ಪುಣೆಯಲ್ಲಿ ನಡೆದಿದೆ.

 ಈ ನಿಟ್ಟಿನಲ್ಲಿ 23 ವರ್ಷದ ಗೇ ವ್ಯಕ್ತಿಯೋರ್ವನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.  ಲೈಂಗಿಕ ಸಂಪರ್ಕ ನಡೆಸಲು ಒತ್ತಾಯಿಸಿದ್ದು, ಇದರಿಂದ ಸಿಟ್ಟಿಗೆದ್ದ ಆತ ಚೂಪಾದ ಆಯುಧದಿಂದ  ಸಂಗಾತಿಯ ಮೇಲೆ ಹಲ್ಲೆ ಮಾಡಿದ್ದಾನೆ.  

ಈ ನಿಟ್ಟಿನಲ್ಲಿ   ಲೈಂಗಿಕ ಸಂಪರ್ಕ ನಡೆಸಲು ಒತ್ತಾಯಿಸಿ ಹಲ್ಲೆಗೊಳಗಾದ 46 ವರ್ಷದ ವ್ಯಕ್ತಿ ದೂರು ದಾಖಲು ಮಾಡಿದ್ದು, ಇದರಿಂದ  ಆತನ ಸಂಗಾತಿ ಮೇಲೆ ಐಪಿಸಿ ಸೆಕ್ಷನ್ 307 ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ಬಂಧನಕ್ಕೆ ಒಳಪಡಿಸಲಾಗಿದೆ.  

ಒಂದು ವರ್ಷದಿಂದ ಇಬ್ಬರೂ ಕೂಡ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಇದ್ದರು. ಬುಧವಾರ ಬೆಳಗ್ಗೆ ಸೆಕ್ಸ್ ಮಾಡುವಂತೆ ಒತ್ತಾಯ ಮಾಡಿದ್ದರಿಂದ ಸಿಟ್ಟಿಗೆದ್ದು ಹಲ್ಲೆ ಮಾಡಿದ್ದಾನೆ. ಬಳಿಕ ವ್ಯಕ್ತಿಯನ್ನು  ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.