ವಿಜಯಪುರ[ಫೆ.16]  ಯೋಧರ ಮೇಲಿನ ದಾಳಿ ಬಗ್ಗೆ ಕಾಂಗ್ರೆಸ್ ಮುಖಂಡರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ವಕ್ತಾರ ಎಸ್.ಎಮ್. ಪಾಟೀಲ್  ಗಣಿಯಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಭಾರತ ಸರ್ಕಾರ ಪಾಕಿಸ್ತಾನಕ್ಕೆ ಗುರಿಮಾಡಿ ಮಾತಾಡುವುದು ತಪ್ಪು. ಕಳೆದ 30 ವರ್ಷಗಳಿಂದ ಕೂಡಾ ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಯುತ್ತಿದೆ. ಕಾಶ್ಮೀರದಲ್ಲಿ ನಡೆದ ಘಟನೆಗೆ ಗೌರ್ನರ್ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಅದರ ಕುರಿತು ತನಿಖೆ ಆಗಬೇಕು. ಇದಲ್ಲದೆ ಕಳೆದ 4 ವರ್ಷಗಳ ಅವಧಿಯಲ್ಲಿ ಕಾಶ್ಮೀರದಲ್ಲಿ ಉಗ್ರರ ಸಂಖ್ಯೆ ಹೆಚ್ಚಾಗಿದೆ ಎಂದಿದ್ದಾರೆ.

ಪಾಕ್ ಗಡಿಯಲ್ಲಿ ಭಾರತೀಯ ಯುದ್ಧ ವಿಮಾನಗಳ ಹಾರಾಟ, ಯಾವುದರ ಸೂಚನೆ

ಮೊದಲು ಇವುಗಳ ಮೂಲ ಕಂಡು ಹಿಡಿಯಬೇಕು. ಅದನ್ನು ಹೊರತುಪಡಿಸಿ ಪಾಕ್ ಗೆ ಬೊಟ್ಟು ಮಾಡಿ ತೋರಿಸುವುದರಿಂದ ಮತ್ತು ಭಾರತದಲ್ಲಿ ದ್ವಜ ಹಿಡಿದುಕೊಂಡು ಓಡಾಡುವುದರಿಂದ ಯಾವುದೇ ಉಪಯೋಗವಿಲ್ಲ ಎಂದು ಹೇಳಿದ್ದು ಟೀಕೆಗೆ ಗುರಿಯಾಗಿದೆ.