ಪಲ್ಸರ್ ಸುನಿಯ ಪರಿಚಯಸ್ಥನೆಂದು ಹೇಳಲಾದ ಪ್ರಿಯೇಶ್ ಮನೆಗೆ ಪೊಲೀಸರು ಶನಿವಾರ ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಸ್ಮಾರ್ಟ್‌ಫೋನ್‌ನ ಪೌಚ್, ಎರಡು ಮೆಮೊರಿ ಕಾರ್ಡ್, ಒಂದು ಪೆನ್‌ಡ್ರೈವ್ ಪತ್ತೆಯಾಗಿದೆ. ನಟಿಯ ಚಿತ್ರ ಚಿತ್ರೀಕರಿಸಲು ಬಳಸಿದ್ದ ಮೊಬೈಲ್ ಫೋನ್ ಅನ್ನು ಕೊಳಚೆ ಪ್ರದೇಶವೊಂದರಲ್ಲಿ ಬಿಸಾಕಿದ್ದೆ ಎಂದು ಸುನಿ ಈ ಮೊದಲು ಹೇಳಿದ್ದ.

ಕೊಚ್ಚಿ(ಫೆ.25): ಮಲಯಾಳಂ ನಟಿಯ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಸಿ ಮಹತ್ವದ ಸಾಕ್ಷ್ಯ ಲಭ್ಯವಾಗಿದೆ ಎನ್ನಲಾಗಿದೆ. ನಟಿಯ ಮೇಲೆ ದಾಳಿ ನಡೆದ ರಾತ್ರಿ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಭೇಟಿ ನೀಡಿದ್ದನೆನ್ನಲಾದ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಪೆನ್‌ಡ್ರೈವ್, ಮೆಮೊರಿ ಕಾರ್ಡ್ ಸಹಿತ ಮಹತ್ವದ ಸಾಕ್ಷ್ಯಗಳು ದೊರಕಿವೆ ಎಂದು ವರದಿಯಾಗಿದೆ.

ಪಲ್ಸರ್ ಸುನಿಯ ಪರಿಚಯಸ್ಥನೆಂದು ಹೇಳಲಾದ ಪ್ರಿಯೇಶ್ ಮನೆಗೆ ಪೊಲೀಸರು ಶನಿವಾರ ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಸ್ಮಾರ್ಟ್‌ಫೋನ್‌ನ ಪೌಚ್, ಎರಡು ಮೆಮೊರಿ ಕಾರ್ಡ್, ಒಂದು ಪೆನ್‌ಡ್ರೈವ್ ಪತ್ತೆಯಾಗಿದೆ. ನಟಿಯ ಚಿತ್ರ ಚಿತ್ರೀಕರಿಸಲು ಬಳಸಿದ್ದ ಮೊಬೈಲ್ ಫೋನ್ ಅನ್ನು ಕೊಳಚೆ ಪ್ರದೇಶವೊಂದರಲ್ಲಿ ಬಿಸಾಕಿದ್ದೆ ಎಂದು ಸುನಿ ಈ ಮೊದಲು ಹೇಳಿದ್ದ. ಇದೀಗ ಪ್ರಿಯೇಶ್ ಮನೆಯಲ್ಲಿ ಪತ್ತೆಯಾಗಿರುವ ಮೆಮೊರಿ ಕಾರ್ಡ್ ಮತ್ತು ಪೆನ್‌ಡ್ರೈವ್‌ನಲ್ಲಿ ಪ್ರಕರಣಕ್ಕೆ ಸಂಬಂಸಿ ಯಾವುದಾದರೂ ಸಾಕ್ಷ್ಯ ದೊರೆಯಲಿದೆಯೇ? ಎಂಬುದನ್ನು ಕಾದು ನೋಡಬೇಕಾಗಿದೆ.

ಸಾಮಾನ್ಯ ವ್ಯಕ್ತಿಯಿಂದ ಮಾಹಿತಿ?:

ಇನ್ನೊಂದೆಡೆ, ಪ್ರಕರಣಕ್ಕೆ ಸಂಬಂಸಿ ಸಾಮಾನ್ಯ ವ್ಯಕ್ತಿಯೊಬ್ಬರಿಂದ ಮಹತ್ವದ ಮಾಹಿತಿ ಪೊಲೀಸರಿಗೆ ದೊರಕಿದೆ ಎಂದು ಎಡಿಜಿಪಿ ಬಿ. ಸಂಧ್ಯಾ ಹೇಳಿದ್ದಾರೆ. ತನಿಖಾ ತಂಡವು ಈ ಸಾಮಾನ್ಯ ವ್ಯಕ್ತಿಯ ಪರಿಚಯವನ್ನು ಬಹಿರಂಗ ಪಡಿಸಿಲ್ಲ. ನಟಿಯ ಮೇಲಿನ ದಾಳಿಗೆ ಸಂಬಂಧಿಸಿದಂತೆ ನಡೆದಿರುವ ಮಾತುಕತೆಯನ್ನು ಆಲಿಸಿಕೊಂಡಿರುವ ಆ ವ್ಯಕ್ತಿ ನೀಡಿರುವ ಮಾಹಿತಿ, ಪ್ರಕರಣದ ತನಿಖೆಗೆ ನೆರವಾಗಿದೆ ಎಂದು ಸಂಧ್ಯಾ ತಿಳಿಸಿದ್ದಾರೆ.