Asianet Suvarna News Asianet Suvarna News

ಚರಂಡಿಯೊಳಗಿಳಿದು ಸ್ವಚ್ಛಗೊಳಿಸಿದ ಸಿಎಂ ಸ್ವಾಮಿ

ಮಹಾತ್ಮ ಗಾಂಧಿ ಅವರ ಜಯಂತಿಗೆ ಮೋದಿ ಸರಕಾರ ಹಮ್ಮಿಕೊಂಡ ಸ್ವಚ್ಛ ಭಾರತದ ಅಂಗವಾಗಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಪುದುಚೆರಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ ಖುದ್ದು ಚರಂಡಿಯೊಳಗೆ ಇಳಿದು, ಕಟ್ಟಿದ ಕಸವನ್ನು ತೆಗೆದು ಪ್ರಶಂಸೆಗೆ ಪಾತ್ರರಾಗಿದ್ದಾರೆ.

Puducherry Chief Minister V Narayanasamy steps inside a drain and clean
Author
Bengaluru, First Published Oct 3, 2018, 10:34 AM IST
  • Facebook
  • Twitter
  • Whatsapp

ಪುದುಚೇರಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ವಚ್ಛ ಭಾರತ ಯೋಜನೆ ಸಾಕಾರಕ್ಕಾಗಿ ಪಕ್ಷಬೇಧ ಮರೆತು ಬೆಂಬಲ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. 

 

 

ಇದರ ಭಾಗವಾಗಿ ಗಾಂಧಿ ಜಯಂತಿಯಾದ ಮಂಗಳವಾರ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರು ತಮ್ಮ ಕೈಗೆ ಗ್ಲೋಸ್ ತೊಟ್ಟು, ಸಲಿಕೆ ಹಿಡಿದು ಚರಂಡಿ ದುರಸ್ತಿಗೊಳಿಸಿದ್ದಾರೆ. ಈ ವಿಡಿಯೋದಲ್ಲಿ ಬಿಳಿ ಅಂಗಿ, ಮೇಲೆತ್ತಿ ಕಟ್ಟಲಾಗಿರುವ ಬಿಳಿ ದೋತಿ ತೊಟ್ಟಿರುವ ಸಿಎಂ ನಾರಾಯಣಸ್ವಾಮಿ ಅವರು, ಹೊಲಸಿನಿಂದಾಗಿ ಕಂದು ಬಣ್ಣಕ್ಕೆ ತಿರುಗಿದ ಚರಂಡಿಯೊಳಕ್ಕೆ ಇಳಿದು, ಗಲೀಜನ್ನು ಸಲಿಕೆಯಲ್ಲಿ ಹೊರ ಹಾಕುತ್ತಿದ್ದಾರೆ.

ಪುದೆಚೆರಿಯಲ್ಲಿರುವ ಕನ್ನಡದ ಖ್ಯಾತ ನಿರ್ದೇಶಕಿ ಸುಮನಾ ಕಿತ್ತೂರು ಸಹ ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕಿದ್ದು, ಸದಾ ರಾಜ್ಯಪಾಲೆ ಕಿರಣ್ ಬೇಡಿ ಅವರೊಂದಿಗೆ ಕಾದಾಡಿ ಬಳಲುವ ಸ್ವಾಮಿಯ ಈ ಕಾರ್ಯ ಎಲ್ಲರಿಗೂ ಮಾದರಿ ಎಂದು ಹೇಳಿದ್ದಾರೆ.

Follow Us:
Download App:
  • android
  • ios