ಮೂರನೇ ಸ್ಥಾನದಲ್ಲಿರುವ ಉತ್ತರ ಕನ್ನಡ ಜಿಲ್ಲೆಗೂ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಗೂ ಫಲಿತಾಂಶದಲ್ಲಿ ಶೇ.18ರಷ್ಟು ಅಂತರವಿದೆ. ಬೀದರ್ ಜಿಲ್ಲೆ ಶೇ. 42.01 ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಬೆಂಗಳೂರು(ಮೇ 11): ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಆನ್'ಲೈನ್'ನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳ ರಿಸಲ್ಟ್ಸ್ ಲಭ್ಯವಿದೆ. ಜಿಲ್ಲಾವಾರು ಫಲಿತಾಂಶಕ್ಕೆ ಬಂದರೆ ಉಡುಪಿ ಪ್ರಥಮ ಸ್ಥಾನ ಪಡೆದಿದೆ. ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ಎರಡನೇ ಸ್ಥಾನಕ್ಕಿಳಿದಿದೆ. ಇವೆರಡು ಜಿಲ್ಲೆಗಳಲ್ಲಿ ಮಾತ್ರ ಗಮನಾರ್ಹ ಎನಿಸುವಂಥ ಫಲಿತಾಂಶ ಬಂದಿದೆ. ಮೂರನೇ ಸ್ಥಾನದಲ್ಲಿರುವ ಉತ್ತರ ಕನ್ನಡ ಜಿಲ್ಲೆಗೂ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಗೂ ಫಲಿತಾಂಶದಲ್ಲಿ ಶೇ.18ರಷ್ಟು ಅಂತರವಿದೆ. ಬೀದರ್ ಜಿಲ್ಲೆ ಶೇ. 42.01 ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಜಿಲ್ಲಾವಾರು ಫಲಿತಾಂಶ ಪಟ್ಟಿ

ಉಡುಪಿ 90.01%

ದಕ್ಷಿಣ ಕನ್ನಡ 89.92%

ಉತ್ತರ ಕನ್ನಡ 71.99%

ಕೊಡಗು 70.83%

ಚಿಕ್ಕಮಗಳೂರು 68.03%

ಶಿವಮೊಗ್ಗ 68.00%

ಬೆಂಗಳೂರು ಉತ್ತರ 67.17%

ಬೆಂಗಳೂರು ದಕ್ಷಿಣ 66.63%

ಚಾಮರಾಜನಗರ 65.34%

ಬಾಗಲಕೋಟೆ 63.11%

ಹಾಸನ 59.88%

ಬೆಂಗಳೂರು ಗ್ರಾಮಾಂತರ 59.64%

ಚಿಕ್ಕಬಳ್ಳಾಪುರ 59.63%

ಮೈಸೂರು 59.03%

ಕೋಲಾರ 57.87%

ಕೊಪ್ಪಳ 56.84%

ಮಂಡ್ಯ 56.43%

ಧಾರವಾಡ 55.73%

ದಾವಣಗೆರೆ 55.17%

ಬಳ್ಳಾರಿ 55.13%

ಹಾವೇರಿ 54.95%

ತುಮಕೂರು 54.72%

ಗದಗ 53.11%

ರಾಮನಗರ 51.55%

ಚಿತ್ರದುರ್ಗ 47.31%

ರಾಯಚೂರು 46.98%

ಕಲಬುರ್ಗಿ 44.94%

ಬೆಳಗಾವಿ 44.25%

ವಿಜಯಪುರ 43.00%

ಯಾದಗಿರಿ 42.07%

ಬೀದರ್ 42.05%