ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಮೇ 18 ರಂದು ತಮ್ಮ 87 ನೇ ಹುಟ್ಟುಹಬ್ಬ ಆಚರಿಸಿಕೊಂಡರು.  ದೇವೇಗೌಡ್ರ ಹುಟ್ಟುಹಬ್ಬಕ್ಕೆ ಸುಮಲತಾ ವಿಶ್ ಮಾಡಿದ್ದಾರೆ. 

ಗೌರವಾನ್ವಿತ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್ ಡಿ ದೇವೇಗೌಡರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಎಂದು ವಿಶ್ ಮಾಡಿದ್ದರು.

 

ಸುಮಲತಾ ವಿಶ್ ಮಾಡಿದ್ದಕ್ಕೆ ಪರ-ವಿರೋಧ ಮಾತುಗಳು ಕೇಳಿ ಬಂದಿವೆ. 

ಮಂಡ್ಯ ಅಖಾಡದಲ್ಲಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಪ್ರತಿಸ್ಪರ್ಧಿಗಳಾಗಿದ್ದಾರೆ. ಚುನಾವಣಾ ಅಖಾಡದಲ್ಲಿ ಇಬ್ಬರ ನಡುವೆ ಆರೋಪ-ಪ್ರತ್ಯಾರೋಪ ಜೋರಾಗಿ ಕೇಳಿ ಬಂದಿತ್ತು. ಸುಮಲತಾ ಬಗ್ಗೆ ನಿಖಿಲ್, ಕುಮಾರಸ್ವಾಮಿ, ರೇವಣ್ಣ ಹೇಳಿಕೆಗಳು ಸದ್ದು ಮಾಡಿತ್ತು. ದೇವೇಗೌಡರ ಹುಟ್ಟುಹಬ್ಬಕ್ಕೆ ಸುಮಲತಾ ವಿಶ್ ಮಾಡಿದ್ದು ಸಹಜವಾಗಿ ಪರ-ವಿರೋಧ ಮಾತಿಗೆ ಕಾರಣವಾಗಿದೆ.