ತವಾಂಗ್‌ನಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ 7 ಮಂದಿ ಯೋಧರ ಮೃತ ದೇಹಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ರಟ್ಟಿನ ಬಾಕ್ಸ್‌ನಲ್ಲಿ ಹಾಕಿದ ಘಟನೆ ನಡೆದಿದೆ. ಇದೋ ನೋಡಿ ದೇಶಕ್ಕಾಗಿ ಮಡಿದ ಯೋಧರಿಗೆ ಸಿಗುವ ಗೌರವ ಎಂದು ಈ ಫೋಟೊಗಳನ್ನು ಉತ್ತರ ಸೇನಾ ಕಮಾಂಡರ್ ಲೆ.ಜ. (ನಿವೃತ್ತ) ಎಚ್.ಎಸ್. ಪನಾಗ್ ಟ್ವೀಟ್ ಮಾಡಿದ್ದರು.

ನವದೆಹಲಿ: ತವಾಂಗ್‌ನಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ 7 ಮಂದಿ ಯೋಧರ ಮೃತ ದೇಹಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ರಟ್ಟಿನ ಬಾಕ್ಸ್‌ನಲ್ಲಿ ಹಾಕಿದ ಘಟನೆ ನಡೆದಿದೆ. ಇದೋ ನೋಡಿ ದೇಶಕ್ಕಾಗಿ ಮಡಿದ ಯೋಧರಿಗೆ ಸಿಗುವ ಗೌರವ ಎಂದು ಈ ಫೋಟೊಗಳನ್ನು ಉತ್ತರ ಸೇನಾ ಕಮಾಂಡರ್ ಲೆ.ಜ. (ನಿವೃತ್ತ) ಎಚ್.ಎಸ್. ಪನಾಗ್ ಟ್ವೀಟ್ ಮಾಡಿದ್ದರು.

ಪ್ರಕರಣ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸೇನೆ, ಸ್ಥಳೀಯವಾಗಿ ಸಿಕ್ಕಿರುವ ಸಂಪನ್ಮೂಲದಿಂದ ಮೃತದೇಹಗಳನ್ನು ಸುತ್ತಲಾಗಿತ್ತು. ಅಪಘಾತದಲ್ಲಿ ಮಡಿದ ಯೋಧರಿಗೆ ಸಕಲ ಸೇನಾ ಗೌರವಗಳನ್ನು ನೀಡಲಾಗುತ್ತದೆ ಎಂದಿದೆ.