ಪಿಯುಸಿ ವಿವಿಧ ಶುಲ್ಕ ಶೇ.66 ರವರೆಗೆ ಏರಿಕೆ

First Published 1, Apr 2018, 6:52 AM IST
PU Plan Fee Hike
Highlights

ಹೊಸ ಕಾಲೇಜು, ನೂತನ ಕೋರ್ಸ್, ವರ್ಗಾವಣೆ ಪ್ರಮಾಣ ಪತ್ರ, ನೋಂದಣಿ ಶುಲ್ಕ, ಪರೀಕ್ಷಾ ಶುಲ್ಕ, ಮರು ಮೌಲ್ಯಮಾಪನ, ಅಂಕಪಟ್ಟಿ, ಅನುತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿ, ಪರೀಕ್ಷಾ ಕೇಂದ್ರದ ಬದಲಾವಣೆ ಸೇರಿದಂತೆ ವಿವಿಧ ರೀತಿಯ 46 ಶುಲ್ಕಗಳನ್ನು ಪರಿಷ್ಕರಣೆ ಮಾಡಲಾಗಿದೆ.

ಮುಂಬರುವ (2018-19) ಶೈಕ್ಷಣಿಕ ಸಾಲಿನಿಂದ ರಾಜ್ಯದ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಪ್ರವೇಶ ಶುಲ್ಕ ಪರೀಕ್ಷಾ ಶುಲ್ಕ, ಮರು ಮೌಲ್ಯ ಮಾಪನ ಶುಲ್ಕ ಸೇರಿದಂತೆ 46 ಶುಲ್ಕಗಳನ್ನು ಶೇ. 30 ರಿಂದ 66ರವರೆಗೆ ಪರಿಷ್ಕರಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶಿಸಿದೆ.

ಹೊಸ ಕಾಲೇಜು, ನೂತನ ಕೋರ್ಸ್, ವರ್ಗಾವಣೆ ಪ್ರಮಾಣ ಪತ್ರ, ನೋಂದಣಿ ಶುಲ್ಕ, ಪರೀಕ್ಷಾ ಶುಲ್ಕ, ಮರು ಮೌಲ್ಯಮಾಪನ, ಅಂಕಪಟ್ಟಿ, ಅನುತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿ, ಪರೀಕ್ಷಾ ಕೇಂದ್ರದ ಬದಲಾವಣೆ ಸೇರಿದಂತೆ ವಿವಿಧ ರೀತಿಯ 46 ಶುಲ್ಕಗಳನ್ನು ಪರಿಷ್ಕರಣೆ ಮಾಡಲಾಗಿದೆ.ಈ ಮೊದಲು 2013-14ರಲ್ಲಿ ಪರಿಷ್ಕರಣೆ ಮಾಡಿತ್ತು. ವಿವಿಧ ಇಲಾಖೆಗಳ ತೆರಿಗೆಯೇತರ ಆದಾಯ ದರಗಳನ್ನು ಪರಿಷ್ಕರಣೆ ಕುರಿತು ರಚಿಸಲಾದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯ ಸಮಿತಿಯು ನೀಡಿರುವ ಶಿಫಾರಸಿನ ಆಧಾರದ ಮೇಲೆ ನೂತನ ದರ ಪರಿಷ್ಕರಣೆ ಮಾಡಲಾಗಿದೆ.

loader