ಮತ್ತೆ ಶುರುವಾಯ್ತು ಪಿಯು ಉಪನ್ಯಾಸಕರ ಪ್ರತಿಭಟನೆ

First Published 18, Mar 2018, 6:51 PM IST
PU Lecturer Boycott to Valuation
Highlights

ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳು ಹಾಗೂ ಪೋಷಕರು ರಿಲಾಕ್ಸ್ ಮೂಡ್ ನಲ್ಲಿ ಇದ್ರೆ. ಇತ್ತ, ಪಿಯು ಬೋರ್ಡ್ ನ ಅಧಿಕಾರಿಗಳು ಸಂಕಷ್ಟಕ್ಕೆ ಸಿಲಕಿದ್ದಾರೆ.ಏಪ್ರಿಲ್ ಎರಡನೇ ವಾರದಲ್ಲಿ ದ್ವಿತೀಯ ಪಿಯು ಫಲಿತಾಂಶ ಕೋಡ್ತೀವಿ ಎಂದಿದ್ದ ಪಿಯು ಮಂಡಳಿಗೆ ಸಂಕಷ್ಟ ಎದುರುರಾಗಿದೆ. ಬೇಡಿಕೆ ಈಡೇರಿಸದ ಸರ್ಕಾರದ ವಿರುದ್ಧ ಇದೇ 23 ರಿಂದ ಪಿಯು ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕಾರಿಸುವುದಾಗಿ ರಾಜ್ಯ ಪಿಯು ಉಪನ್ಯಾಸಕರ ಸಂಘ ಮುಂದಾಗಿದೆ.

ಬೆಂಗಳೂರು (ಮಾ. 18):  ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳು ಹಾಗೂ ಪೋಷಕರು ರಿಲಾಕ್ಸ್ ಮೂಡ್ ನಲ್ಲಿ ಇದ್ರೆ. ಇತ್ತ, ಪಿಯು ಬೋರ್ಡ್ ನ ಅಧಿಕಾರಿಗಳು ಸಂಕಷ್ಟಕ್ಕೆ ಸಿಲಕಿದ್ದಾರೆ.ಏಪ್ರಿಲ್ ಎರಡನೇ ವಾರದಲ್ಲಿ ದ್ವಿತೀಯ ಪಿಯು ಫಲಿತಾಂಶ ಕೋಡ್ತೀವಿ ಎಂದಿದ್ದ ಪಿಯು ಮಂಡಳಿಗೆ ಸಂಕಷ್ಟ ಎದುರುರಾಗಿದೆ.ಬೇಡಿಕೆ ಈಡೇರಿಸದ ಸರ್ಕಾರದ ವಿರುದ್ಧ ಇದೇ 23 ರಿಂದ ಪಿಯು ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕಾರಿಸುವುದಾಗಿ ರಾಜ್ಯ ಪಿಯು ಉಪನ್ಯಾಸಕರ ಸಂಘ ಮುಂದಾಗಿದೆ.

ದ್ವಿತೀಯ ಪಿಯು ಪರೀಕ್ಷೆ ಮುಗಿಸಿ ರಿಲಾಕ್ಸ್ ಮೂಡ್ ನಲ್ಲಿರುವ ವಿದ್ಯಾರ್ಥಿಗಳು.ಮತ್ತೊಂದು ಕಡೆ ಪಿಯು ಮಂಡಳಿಗೆ ಪಿಯು ಉಪನ್ಯಾಸಕರ ಪ್ರತಿಭಟನೆ ಬಿಸಿ..ಹೌದು, ಇದೇ 23 ರಿಂದ ಪಿಯು ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕಾರ ಹಾಕಿ ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ..ಸರಕಾರ ಇದುವರೆಗೂ ಉಪನ್ಯಾಸಕರ ಬೇಡಿಕೆಗಳನ್ನ ಈಡೇರಿಸಲು ಮುಂದಾಗದೇ ಇರೋದಕ್ಕೆ ರಾಜ್ಯ ಉಪನ್ಯಾಸಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ..ನಿನ್ನೆ ರಾಜ್ಯ ಪಿಯು ಉಪನ್ಯಾಸಕರ ಸಂಘ ಸಭೆ ನಡೆಸಿದ್ದು, ಸಭೆಯಲ್ಲಿ ಅಂತಿಮವಾಗಿ ಮೌಲ್ಯಮಾಪನ ಬಹಿಷ್ಕಾರ ಹಾಕಲು ನಿರ್ಣಯ ತೆಗೆದುಕೊಳ್ಳಲಾಗಿದೆ ಅಂತ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ತೀಮ್ಮಯ್ಯ ಪುರ್ಲೆ ಹೇಳಿದ್ದಾರೆ. 

ಇನ್ನು ಈಗಾಗಲೇ ಉಪನ್ಯಾಸಕರು ಪ್ರತಿಭಟನೆ ನಡೆಸುವ ಬಗ್ಗೆ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಆಲ್ಲದೆ ಪರೀಕ್ಷೆ ಆರಂಭಕ್ಕೂ ಮುನ್ನವೇ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ರು..ಆದ್ರೆ ಸರ್ಕಾರ ಉಪನ್ಯಾಸಕರ ವೇತನ ತಾರತಮ್ಯ ಸರಿಪಡಿಸುವ ಕೆಲಸಕ್ಕೆ ಮುಂದಾಗಿಲ್ಲ..ಹೀಗಾಗಿ ಮತ್ತೆ ಪ್ರತಿಭಟನೆಯ ಹಾದಿ ತುಳಿದಿರುವುದಾಗಿ ಪಿಯು ಉಪನ್ಯಾಸಕರ ಸಂಘ ಸ್ಪಷ್ಟ ಪಡಿಸಿದೆ. 

ಕಳೆದ ಎರಡು ವರ್ಷಗಳ ಹಿಂದೆ ಇದೇ ರೀತಿ ಉಪನ್ಯಾಸಕರು ಮೌಲ್ಯಮಾಪನಕ್ಕೆ ಬಹಿಷ್ಕಾರ ಹಾಕಿ ಪ್ರೀಡಂ ಪಾರ್ಕ್ ನಲ್ಲಿ 18 ದಿನಗಳ ಕಾಲ ಉಪನ್ಯಾಸಕರು ಪ್ರತಿಭಟನೆ ನಡೆಸಿದ್ರು..ಆದ್ರೆ ಇದೀಗ ಮತ್ತೆ ಉಪನ್ಯಾಸಕರು ಪ್ರತಿಭಟನೆಯ ಹಾದಿ ಹಿಡಿದಿದ್ದು, ಸರ್ಕಾರ ಉಪನ್ಯಾಸಕರ ಬೇಡಿಕೆಗಳನ್ನ ಈಡೇರಿಸುತ್ತಾ ಅನ್ನೋದು ಸಧ್ಯಕ್ಕೆ ಕಾದು ನೋಡಬೇಕಿದೆ. 

 

loader