ಗಡಿಯಲ್ಲಿ ಕಾಲು ಕೆರೆದು ಜಗಳಕ್ಕೆ ಇಳಿಯುವ ಚೀನಾ ಯೋಧರಿಗೆ ದಿಟ್ಟ ಉತ್ತರ ನೀಡುವ ಭಾರತ- ಟಿಬೆಟ್ ಗಡಿ ಭದ್ರತಾ ಪಡೆ (ಐಟಿಬಿಪಿ)ಯ ಯೋಧರಿಗೆ ಯೋಗಗುರು ಬಾಬಾ ರಾಮದೇವ್ ಅವರು ತರಬೇತಿ ಆರಂಭಿಸಿದ್ದಾರೆ.
ನವದೆಹಲಿ(ಸೆ.03): ಗಡಿಯಲ್ಲಿ ಕಾಲು ಕೆರೆದು ಜಗಳಕ್ಕೆ ಇಳಿಯುವ ಚೀನಾ ಯೋಧರಿಗೆ ದಿಟ್ಟ ಉತ್ತರ ನೀಡುವ ಭಾರತ- ಟಿಬೆಟ್ ಗಡಿ ಭದ್ರತಾ ಪಡೆ (ಐಟಿಬಿಪಿ)ಯ ಯೋಧರಿಗೆ ಯೋಗಗುರು ಬಾಬಾ ರಾಮದೇವ್ ಅವರು ತರಬೇತಿ ಆರಂಭಿಸಿದ್ದಾರೆ.
ಹಿಮಾಲಯದ ಪ್ರತಿಕೂಲ ಹವಾಮಾನ ಹಾಗೂ ಶೂನ್ಯಕ್ಕಿಂತ ಕಡಿಮೆ ತಾಪದಲ್ಲಿ ಕಾರ್ಯನಿರ್ವಹಿಸುವ ಐಟಿಬಿಪಿ ಯೋ‘ರನ್ನು ಮಾನಸಿಕ ಹಾಗೂ ದೈಹಿಕವಾಗಿ ಮತ್ತಷ್ಟು ಸಮರ್ಥರನ್ನಾಗಿಸುವುದಲ್ಲದೆ, ಒತ್ತಡ ನಿರ್ವಹಣೆ ಕುರಿತು ರಾಮದೇವ್ ತರಬೇತಿ ನೀಡಲಿದ್ದಾರೆ.
ಯೋಧರಿಗೆ ರಾಮದೇವ್‌ರಿಂದ ತರಬೇತಿ ಕೊಡಿಸುವ ಆಲೋಚನೆ ಮಂಚೆಯೇ ಇತ್ತು. ಅದಕ್ಕೆ ರಾಮದೇವ್ ಒಪ್ಪಿಗೆ ಸೂಚಿಸಿದ್ದರು. ಗೃಹ ಸಚಿವಾಲಯದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಇದು ಅಂತಿಮಗೊಂಡಿತು. ನೋಯ್ಡಾದಲ್ಲಿರುವ ಕೇಂದ್ರದಲ್ಲಿ ಐಟಿಬಿಪಿಯ 39ನೇ ಬೆಟಾಲಿಯನ್‌ನ 500 ಯೋಧರಿಗೆ ರಾಮದೇವ್ ತರಬೇತಿ ಆರಂಭಿಸಿದ್ದಾರೆ. ಬಿಎಸ್'ಎಫ್, ಸಿಐಎಸ್'ಎಫ್ ಹಾಗೂ ಕೇಂದ್ರೀಯ ಮೀಸಲು ಪಡೆ ಪೊಲೀಸರಿಗೂ ಈ ಹಿಂದೆ ರಾಮದೇವ್ ಅವರು ಆಗಾಗ್ಗೆ ತರಬೇತಿ ನೀಡಿದ್ದರು.
