ನ್ಯೂಯಾರ್ಕ್’ನ ಜಾನ್ ಎಫ್ ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳು ಪ್ರವೇಶ ನಿಷೇಧಿಸಲ್ಪಟ್ಟ ದೇಶಗಳ 11 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಮಂದಿ ಪ್ರತಿಭಟನಕಾರರು ಅಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ನ್ಯೂಯಾರ್ಕ್ (ಜ.29): ಏಳು ಮುಸ್ಲಿಮ್ ದೇಶಗಳ ಪ್ರಜೆಗಳಿಗೆ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಷೇಧ ಹೇರಿರುವ ಕ್ರಮಕ್ಕೆ ಪ್ರತಿಯಾಗಿ ಅಮೆರಿಕಾದಲ್ಲಿ ವ್ಯಾಪಕ ಪ್ರತಿಭಟನೆಗಳು ಆರಂಭವಾಗಿವೆ.
ನ್ಯೂಯಾರ್ಕ್’ನ ಜಾನ್ ಎಫ್ ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳು ಆ ದೇಶಗಳ 11 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಮಂದಿ ಪ್ರತಿಭಟನಕಾರರು ಅಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಇನ್ನೊಂದು ಕಡೆ, ಫೆಡರಲ್ ನ್ಯಾಯಾಧೀಶರು, ಟ್ರಂಪ್’ರ ವಿವಾದಾತ್ಮಕ ಆದೇಶಕ್ಕೆ ತಡೆ ನೀಡಿದ್ದಾರೆ ಎಂದು ಅಮೆರಿಕನ್ ಮಾಧ್ಯಮಗಳು ವರದಿ ಮಾಡಿವೆ.
ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ನಡೆದ ಪ್ರತಿಭಟನೆಯಲ್ಲಿ ಗೂಗಲ್ ಸಹ-ಸ್ಥಾಪಕ ಸರ್ಗಿ ಬ್ರಿನ್ ಕೂಡಾ ಭಾಗಿಯಾಗಿದ್ದರು.
‘ನಾವೆಲ್ಲರೂ ವಲಸಿಗರು’ ‘ಅವರಿಗೆ ಪ್ರವೇಶ ನೀಡಿ’ ‘ನಿರಾಶ್ರಿತರಿಗೆ ಸ್ವಾಗತ’ ‘ವಿರೋಧಿಸಿ’ ‘ಪ್ರತಿಭಟಿಸಿ’ ಎಂಬಿತ್ಯಾದಿ ಪ್ಲಕಾರ್ಡ್’ಗಳನ್ನು ಹಿಡಿದು ಪ್ರತಿಭಟನಕಾರರು ಪ್ರದರ್ಶಿಸಿದ್ದಾರೆ.
ಗೂಗಲ್ ಸಿಇಓ ಸುಂದರ್ ಪಿಚೈ, ಫೇಸ್ ಬುಕ್ ಸ್ಥಾಪಕ ಮಾರಕ್ ಝುಕರ್’ಬರ್ಗ್ ಹಾಗೂ ಜಾಗತಿಕ ನಾಯಕರು ಟ್ರಂಪ್ ವಿವಾದಾತ್ಮಕ ಆದೇಶವನ್ನು ಖಂಡಿಸಿದ್ದಾ
