ಹಾಂಗ್‌ಕಾಂಗ್ ಸಂಸತ್ ಮೇಲೆ ದಾಳಿ| ಚೀನಾ ಮುಖ್ಯಭೂಮಿಗೆ ಗಡಿಪಾರು ಮಾಡುವ ವಿವಾದಿತ ಮಸೂದೆ ವಿರೋಧಿಸಿ ಪ್ರತಿಭಟನೆ
ಹಾಂಗ್‌ಕಾಂಗ್[ಜು.02]: ಕ್ರಿಮಿನಲ್ ಪ್ರಕರಣಗಳ ಆರೋಪಿಗಳನ್ನು ಚೀನಾ ಮುಖ್ಯಭೂಮಿಗೆ ಗಡಿಪಾರು ಮಾಡುವ ವಿವಾದಿತ ಮಸೂದೆ ವಿರೋಧಿಸಿ ಕಳೆದ ಮೂರು ವಾರಗಳಿಂದ ಹಾಂಗ್‌ಕಾಂಗ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಸೋಮವಾರ ಭಾರೀ ಹಿಂಸಾಚಾರ ನಡೆದಿದೆ.
ಪ್ರಸ್ತಾವಿತ ಮಸೂದೆ ವಿರೋಧಿಸುತ್ತಿರುವ ಪ್ರಜಾಪ್ರಭುತ್ವ ಪರ ಹೋರಾಟಗಾರರು, ಹಾಂಗ್‌ಕಾಂಗ್ ಬ್ರಿಟನ್‌ನಿಂದ ಚೀನಾಕ್ಕೆ ಸೇರ್ಪಡೆಗೊಂಡ 22ನೇ ವರ್ಷಾಚರಣೆ ದಿನವಾದ ಸೋಮವಾರ ಸಂಸತ್ತಿನ ಮೇಲೆ ದಾಳಿ ನಡೆಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು, ಸಂಸತ್ ಆವರಣದೊಳಗೆ ಪ್ರವೇಶಿಸಿ ಗಾಜಿನ ತಡೆಗೋಡೆಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ ಸಂಸತ್ತಿನಲ್ಲಿಡಲಾಗಿದ್ದ ಹಲವು ಮಹನೀಯರ ಫೋಟೋಗಳನ್ನು ಕಿತ್ತುಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನಾಕಾರರು ತಟಸ್ಥರಾಗದಿದ್ದರೆ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಪೊಲೀಸರ ಮನವಿಗೂ ಉದ್ರಿಕ್ತರ ಕಿವಿಗೊಡಲಿಲ್ಲ
