ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ದಿನದಿಂದ ದಿನಕ್ಕೆ ಒಂದಲ್ಲಾ ಒಂದು ಬೆದರಿಕೆಯಲ್ಲಿ ದೀಪಿಕಾ ವಿವಾದವಾಗುತ್ತಿದ್ದಾರೆ. ಮೊನ್ನೆ  ಮೂಗು ಕತ್ತರಿಸುತ್ತೇವೆ ಅಂದಿದ್ದರು. ಇಂದು ಜೀವಕ್ಕೆ  ಇನಾಮು ಇಟ್ಟಿದ್ದಾರೆ.

ನವದೆಹಲಿ (ನ.17): ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ದಿನದಿಂದ ದಿನಕ್ಕೆ ಒಂದಲ್ಲಾ ಒಂದು ಬೆದರಿಕೆಯಲ್ಲಿ ದೀಪಿಕಾ ವಿವಾದವಾಗುತ್ತಿದ್ದಾರೆ. ಮೊನ್ನೆ ಮೂಗು ಕತ್ತರಿಸುತ್ತೇವೆ ಅಂದಿದ್ದರು. ಇಂದು ಜೀವಕ್ಕೆ ಇನಾಮು ಇಟ್ಟಿದ್ದಾರೆ.

ಪದ್ಮಾವತಿ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮತ್ತು ನಟಿ ದೀಪಿಕಾ ಪಡುಕೋಣೆಯ ತಲೆ ಕತ್ತರಿಸಿ ತಂದವರಿಗೆ 5 ಕೋಟಿ ರೂ. ಬಹುಮಾನ ನೀಡುವುದಾಗಿ ರಜಪೂತ್‌ ಕರ್ಣಿ ಸೇನೆ ಮತ್ತು ಚಾತ್ರೀಯ ಸಮಾಜ್‌ ಬೆದರಿಕೆ ಹಾಕಿದ್ದಾರೆ.

ಪದ್ಮಾವತಿ ಸಿನಿಮಾದಲ್ಲಿ ಭಾರತೀಯ ಇತಿಹಾಸವನ್ನ ತಿರುಚಿ ಕ್ಷತ್ರಿಯ ಸಮುದಾಯದ ರಾಣಿಯನ್ನು ತಪ್ಪಾಗಿ ಬಿಂಬಿಸಲಾಗಿದ್ದು, ಇದನ್ನು ನಾವು ಸಹಿಸುವುದಿಲ್ಲ. ಪದ್ಮಾವತಿ ಸಿನಿಮಾವನ್ನು ನಿಷೇಧಿಸಬೇಕು ಹಾಗೂ ನಟಿ ದೀಪಿಕಾ ಪಡುಕೋಣೆ ದೇಶ ಬಿಟ್ಟು ಹೋಗಬೇಕು. ಇಲ್ಲವಾದರೆ ಪ್ರಧಾನಿ ಮೋದಿಯಿಂದಲೂ ಅವರನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.

ಡಿಸೆಂಬರ್‌ 1 ರಂದು ಚಿತ್ರ ಬಿಡುಗಡೆಗೆ ನಿಗದಿಯಾಗಿದ್ದು ಕರ್ನಿ ಸೇನೆ ಭಾರತ್‌ ಬಂದ್‌ಗೆ ಕರೆ ನೀಡಿದೆ. ದಿನದಿಂದ ದಿನಕ್ಕೆ ಪರ-ವಿರೋಧಗಳು ಹೆಚ್ಚಾಗುತ್ತಿವೆ.