2013-14ನೇ ಸಾಲಿನಲ್ಲಿ ಹೊಸ ತಾಲೂಕು ಘೋಷಿಸಿ 2 ಕೋಟಿ ಅನುದಾನ ಸಹ ನೀಡಲಾಗಿತ್ತು. ಆದರೆ ಪ್ರಸಕ್ತ ಹೊಸ ತಾಲೂಕುಗಳಿಗೆ ಅನುಮೋದನೆ ನೀಡುತ್ತಿಲ್ಲ ಎಂದು ಪ್ರತಿಭಟನಕಾರರು ಹೇಳಿದ್ದಾರೆ
ಬೆಳಗಾವಿ (ಡಿ.01): ರಾಜ್ಯ ಸರ್ಕಾರವೇ ಘೋಷಿಸಿರುವ ಹೊಸ 43 ತಾಲೂಕುಗಳಿಗೆ ಶೀಘ್ರವೇ ಅನುಮೋದನೆ ನೀಡಬೇಕೆಂದು ಆಗ್ರಹಿಸಿ ಘೋಷಿತ 43 ತಾಲೂಕುಗಳ ರಾಜ್ಯ ಹೋರಾಟ ಸಮಿತಿ ಬೆಳಗಾವಿಯ ಸುವರ್ಣ ಸೌಧ ಹೊರಗೆ ಪ್ರತಿಭಟನೆ ನಡೆಸಿತು.
2013-14ನೇ ಸಾಲಿನಲ್ಲಿ ಹೊಸ ತಾಲೂಕು ಘೋಷಿಸಿ 2 ಕೋಟಿ ಅನುದಾನ ಸಹ ನೀಡಲಾಗಿತ್ತು. ಆದರೆ ಪ್ರಸಕ್ತ ಹೊಸ ತಾಲೂಕುಗಳಿಗೆ ಅನುಮೋದನೆ ನೀಡುತ್ತಿಲ್ಲ. ಇದರಿಂದ 43 ತಾಲೂಕಿನ ಜನರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಈ ಸಮಸ್ಯೆ ಪಮುಖ ಕಾರಣವಾಗಿದೆ. ಏಕಕಾಲದಲ್ಲಿ 43 ತಾಲೂಕುಗಳನ್ನು ಅನುಮೋದನೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
