ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಸತತ ಮೂರನೇ ದಿನವೂ ಮುಂದುವರಿದಿದೆ. ಈ ಬಡ ಅಂಗನವಾಡಿ ಕಾರ್ಯಕರ್ತೆಯರ ನೋವಿಗೆ ಸ್ಪಂದಿಸಿದ್ದು ಸುವರ್ಣ ನ್ಯೂಸ್. ಕಳೆದ ಮೂರು ದಿನಗಳಿಂದ ನಿರಂತರ ವರದಿ ಪ್ರಸಾರ ಮಾಡುತ್ತಿರುವ ಸುವರ್ಣ ನ್ಯೂಸ್ ನಿನ್ನೆ ರಾತ್ರಿಯಿಂದ ಅಹೋರಾತ್ರಿ ವರದಿಗಾರಿಕೆ ಮಾಡಿ ನೊಂದವರ ಪರ ಧ್ವನಿಯಾಗಿದೆ.

ಬೆಂಗಳೂರು(ಮಾ.22): ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಸತತ ಮೂರನೇ ದಿನವೂ ಮುಂದುವರಿದಿದೆ. ಈ ಬಡ ಅಂಗನವಾಡಿ ಕಾರ್ಯಕರ್ತೆಯರ ನೋವಿಗೆ ಸ್ಪಂದಿಸಿದ್ದು ಸುವರ್ಣ ನ್ಯೂಸ್. ಕಳೆದ ಮೂರು ದಿನಗಳಿಂದ ನಿರಂತರ ವರದಿ ಪ್ರಸಾರ ಮಾಡುತ್ತಿರುವ ಸುವರ್ಣ ನ್ಯೂಸ್ ನಿನ್ನೆ ರಾತ್ರಿಯಿಂದ ಅಹೋರಾತ್ರಿ ವರದಿಗಾರಿಕೆ ಮಾಡಿ ನೊಂದವರ ಪರ ಧ್ವನಿಯಾಗಿದೆ.

ಮೂರು ದಿನಗಳಾದರೂ ಬಡ ಹೆಣ್ಣುಮಕ್ಕಳು ರಾಜಧಾನಿಯ ರಸ್ತೆಗಳಲ್ಲಿ ಹಗಲು, ರಾತ್ರಿಯನ್ನು ಕಳೆಯುತ್ತಿದ್ದಾರೆ. ಸರಿಯಾದ ಊಟ, ನಿದ್ದೆಯಿಲ್ಲದೇ ಹೋರಾಡುತ್ತಿರುವ ಹೆಣ್ಣುಮಕ್ಕಳ ನೋವಿಗೆ ದನಿಯಾಗಿದ್ದು ಸುವರ್ಣ ನ್ಯೂಸ್. ನಮ್ಮ ಆಹೋರಾತ್ರಿ ವರದಿಗೆ ಸಾರ್ವಜನಿಕ ಕರೆಗಳು ಬಂದಿದ್ದೇ ಸಾಕ್ಷಿ.

ಗೌರವ ಧನ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಪ್ರತಿಭಟನೆಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಮತ್ತೊಂದೆಡೆ ನಮ್ಮ ಬೇಡಿಕೆಗಳು ಈಡೇರುವವರೆಗೂ ನಮ್ಮ ಹೋರಾಟ ನಿಲ್ಲಿಸಲ್ಲ ಎಂದು ಹೇಳಿದ್ದಾರೆ. ಬಿಸಿಲ ಜಳದಲ್ಲಿ ದಿನಪೂರ್ತಿ ನಡೆದ ಪ್ರತಿಭಟನೆಯಿಂದಾಗಿ ಎಂಟಕ್ಕೂ ಹೆಚ್ಚು ಮಂದಿ ಮಹಿಳೆಯರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ರೆ, ರಾತ್ರಿ ರಸ್ತೆಯ ಮೇಲೆಯೇ ಮಲಗುವ ಪರಿಸ್ಥಿತಿ. ಇನ್ನೂ ಕೆಲವರು ಎಳೆ ಕಂದಮ್ಮಗಳನ್ನ ಮಡಿಲಲ್ಲಿಟ್ಟುಕೊಂಡು ನಿದ್ದೆಗೆಟ್ಟು ಹೋರಾಡುತ್ತಿದ್ದಾರೆ.

ಈ ಬಡ ಹೆಣ್ಣುಮಕ್ಕಳ ನೋವಿಗೆ ಸ್ಪಂದಿಸಿದ್ದು ಸುವರ್ಣ ನ್ಯೂಸ್. ಅಂಗನವಾಡಿ ಕಾರ್ಯಕರ್ತೆರಯ ಅಹೋರಾತ್ರಿ ಧರಣಿಗೆ ಬೆಂಬಲ ನೀಡಿ ಅಹೋರಾತ್ರಿ ವರದಿಗಾರಿಕೆ ಮಾಡಿದೆ. ನಮ್ಮ ಈ ವರದಿಗೆ ರಾಜ್ಯ ಮಾತ್ರವಲ್ಲದೇ, ಹೊರದೇಶಗಳಿಂದ ಅನೇಕರು ಕರೆ ಮಾಡಿ ಆಂಗನವಾಡಿ ಕಾರ್ಯಕರ್ತೆರಯ ಬೆಂಬಲಕ್ಕೆ ನಿಂತಿದ್ದಾರೆ. ಅಲ್ಲದೇ, ಸುವರ್ಣ ನ್ಯೂಸ್ ವರದಿಗೆ ಶ್ಲಾಘಿಸಿದ್ದಾರೆ. ಅಲ್ಲದೇ, ಕರೆ ಮಾಡಿದ ಹಲವು ಮಂದಿ ಕಣ್ಣೀರು ಹಾಕಿದ್ದಾರೆ.

ನೊಂದವರ ಪರವಾಗಿ ದ್ವನಿಯಾಗಿ ಸುವರ್ಣ ನ್ಯೂಸ್ ನಿರಂತರ ವರದಿ ಪ್ರಸಾರ ಮಾಡಿದೆ. ಹಲವರು ಕರೆ ಮಾಡಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಇನ್ನಾದ್ರೂ ನೊಂದವರ ನೋವು ಸರ್ಕಾರಕ್ಕೆ ಅರ್ಥವಾಗುತ್ತಾ ನೋಡೋಣ.