ಪದ್ಮಾವತಿ ಚಿತ್ರ ಬಿಡುಗಡೆ ವಿರೋಧಿಸಿ ಪ್ರತಿಭಟನೆ ಮುಂದುವರೆದಿದೆ. ರಾಜಸ್ಥಾನದಲ್ಲಿ ಹಿಂಸಾಚಾರ ನಡೆದಿದೆ. ಶ್ರೀ ರಜಪೂತ ಕರ್ಣಿಸೇನಾ ಕಾರ್ಯಕರ್ತರು ಟಾಕೀಸ್'ಗೆ ಮುತ್ತಿಗೆ ಹಾಕಿದ್ದಾರೆ. ಕೋಟದಲ್ಲಿನ ಆಕಾಶ್ ಥಿಯೇಟರ್'ಗೆ ನುಗ್ಗಿ ದಾಂಧಲೆ ನಡೆಸಿ, ಥಿಯೇಟರ್ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ.
ರಾಜಸ್ಥಾನ(ನ.14): ಪದ್ಮಾವತಿ ಚಿತ್ರ ಬಿಡುಗಡೆ ವಿರೋಧಿಸಿ ಪ್ರತಿಭಟನೆ ಮುಂದುವರೆದಿದೆ. ರಾಜಸ್ಥಾನದಲ್ಲಿ ಹಿಂಸಾಚಾರ ನಡೆದಿದೆ. ಶ್ರೀ ರಜಪೂತ ಕರ್ಣಿಸೇನಾ ಕಾರ್ಯಕರ್ತರು ಟಾಕೀಸ್'ಗೆ ಮುತ್ತಿಗೆ ಹಾಕಿದ್ದಾರೆ. ಕೋಟದಲ್ಲಿನ ಆಕಾಶ್ ಥಿಯೇಟರ್'ಗೆ ನುಗ್ಗಿ ದಾಂಧಲೆ ನಡೆಸಿ, ಥಿಯೇಟರ್ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ.
ಪದ್ಮಾವತಿ ಚಿತ್ರದಲ್ಲಿ ಇತಿಹಾಸ ತಿರುಚಿದ್ದಾರೆ. ರಾಣಿ ಪದ್ಮಾವತಿ ಬಗ್ಗೆ ಕೆಟ್ಟದಾಗಿ ಚಿತ್ರಿಸಿದ್ದಾರೆ ಎನ್ನುವ ಆರೋಪದಡಿಯಲ್ಲಿ ಹಿಂದಿನಿಂದಲೂ ಪದ್ಮಾವತಿ ಚಿತ್ರ ಬಿಡುಗಡೆ ಕರ್ಣಿ ಸೇನಾ ಆಕ್ಷೇಪಣೆ ವ್ಯಕ್ತಪಡಿಸುತ್ತಿದೆ. ಒಂದು ವೇಳೆ ಚಿತ್ರ ಬಿಡುಗಡೆ ಮಾಡಿದರೆ ಥಿಯೇಟರ್ ಧ್ವಂಸ ಮಾಡುತ್ತೇವೆಂದು ನ.10ರಂದು ಕರ್ಣಿ ಸೇನಾ ವಿಡಿಯೋ ರಿಲೀಸ್ ಮಾಡಿದೆ. ಇದಲ್ಲದೇ ರಜಪೂತ ಸಮುದಾಯದಲ್ಲಿ ಮಹಿಳೆಯರೂ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
