ಲಖನೌ[ಡಿ.10]: ಅಲಹಾಬಾದ್‌ ಜಿಲ್ಲೆಯ ಹೆಸರನ್ನು ಪ್ರಯಾಗರಾಜ್‌ ಎಂದೂ, ಫೈಜಾಬಾದ್‌ ಜಿಲ್ಲೆಯ ಹೆಸರನ್ನು ಅಯೋಧ್ಯೆ ಎಂದು ರಾಜ್ಯ ಸರ್ಕಾರ ಬದಲಿಸಿದ ಬೆನ್ನಲ್ಲೇ ಅಲಹಾಬಾದ್‌ ವಿವಿ ಹೆಸರನ್ನು ಪ್ರಯಾಗ್‌ರಾಜ್‌ ವಿವಿ ಎಂದು ಬದಲಿಸಲು ವಿವಿಯ ಉಪಕುಲಪತಿ ರಾಜ್ಯಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ.

ವಿವಿಯ ಹೆಸರನ್ನೂ ಪ್ರಯಾಗ್‌ರಾಜ್‌ ಎಂದು ಬದಲಿಸಲು ಬೇಡಿಕೆ ಎಂದು ಇತ್ತಿಚೇಗಷ್ಟೇ ರಾಜ್ಯದ ಉಪಮುಖ್ಯಮಂತ್ರಿ ದಿನೇಶ್‌ ಶರ್ಮಾ ಹೇಳಿದ್ದರು. ಅದರ ಬೆನಲ್ಲೇ, ವಿವಿಯಿಂದ ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ವಿವಿಯ ಈ ಕ್ರಮಕ್ಕೆ ವಿಪಕ್ಷಗಳಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.