ಆಸ್ಪತ್ರೆ ಸೇರಿದ ತಮಿಳುನಾಡಿನ ಅಮ್ಮ , 74 ದಿನಗಳ ಸಾವು ಬದುಕಿನ ಹೋರಾಟ ಅಂತ್ಯವಾಗಿದೆ. ವರ್ಣರಂಜಿತ ರಾಜಕೀಯ ಬದುಕು ಮುಗಿಸಿದ ಜಯಾ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಪುರಚ್ಚಿ ತಲೈವಿಯ ಮೃತ್ಯುವಿನಿಂದ ಇಡೀ ತಮಿಳುನಾಡು ಶೋಕಸಾಗರದಲ್ಲಿ ಮುಳುಗಿದೆ. ಜಯಾ ಸಾವಿನ ಬಳಿಕ ತಮಿಳುನಾಡಿನಲ್ಲಿ ರಾಜಕೀಯ ಆಟವೂ ಶುರುವಾಗಿದೆ. ವಿಧಿವಶರಾದ ಜಯಾ ಇದೀಗ ಬಿಟ್ಟು ಹೋದ ಆಸ್ತಿಯ ವಿವರ ಲಭ್ಯವಾಗಿದೆ. ಜಯಾ 2015 ರ ಏಪ್ರಿಲ್ ನಲ್ಲಿ ಘೋಷಿಸಿಕೊಂಡ ಪ್ರಕಾರ ಇವರು ಆಸ್ತಿ ವಿವರ.

ಚೆನ್ನೈ(ಡಿ.06): ಆಸ್ಪತ್ರೆ ಸೇರಿದ ತಮಿಳುನಾಡಿನ ಅಮ್ಮ , 74 ದಿನಗಳ ಸಾವು ಬದುಕಿನ ಹೋರಾಟ ಅಂತ್ಯವಾಗಿದೆ. ವರ್ಣರಂಜಿತ ರಾಜಕೀಯ ಬದುಕು ಮುಗಿಸಿದ ಜಯಾ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಪುರಚ್ಚಿ ತಲೈವಿಯ ಮೃತ್ಯುವಿನಿಂದ ಇಡೀ ತಮಿಳುನಾಡು ಶೋಕಸಾಗರದಲ್ಲಿ ಮುಳುಗಿದೆ. ಜಯಾ ಸಾವಿನ ಬಳಿಕ ತಮಿಳುನಾಡಿನಲ್ಲಿ ರಾಜಕೀಯ ಆಟವೂ ಶುರುವಾಗಿದೆ.

ವಿಧಿವಶರಾದ ಜಯಾ ಇದೀಗ ಬಿಟ್ಟು ಹೋದ ಆಸ್ತಿಯ ವಿವರ ಲಭ್ಯವಾಗಿದೆ. ಜಯಾ 2015 ರ ಏಪ್ರಿಲ್ ನಲ್ಲಿ ಘೋಷಿಸಿಕೊಂಡ ಪ್ರಕಾರ ಇವರು ಆಸ್ತಿ ವಿವರ ಹೀಗಿದೆ.

ಜಯಲಲಿತಾ ಘೋಷಿಸಿಕೊಂಡಿರೋ ಸ್ಥಿರ - ಚರಾಸ್ತಿ - 113, 73 ಕೋಟಿ

ಚರಾಸ್ತಿ - 41. 63 ಕೋಟಿ

ಸ್ಥಿರಾಸ್ತಿ - 72. 09 ಕೋಟಿ

ನಗದು :

41 ಸಾವಿರ ನಗದು, ಇತರೆ ಮೂಲಗಳಿಂದ 2. 04 ಕೋಟಿ

ಹೂಡಿಕೆ :

-ಐಟಿ ಕಂಪನಿಗಳಲ್ಲಿ 27.44 ಕೋಟಿ ಹೂಡಿಕೆ

-ಶ್ರೀ ಜಯಾ ಪಬ್ಲಿಕೇಷನ್, ಶಶಿ ಎಂಟರ್ ಪ್ರೈಸಸ್, ಕೊಡನಾಡ್ ಎಸ್ಟೇಟ್, ರಾಯಲ್ ವ್ಯಾಲಿ ಫ್ಲೋರಿಟೆಕ್, ಎಕ್ಸ್ ಪೋರ್ಟ್ಸ್, ಗ್ರೀನ್ ಟೀ ಎಸ್ಟೇಟ್ ಕಂಪನಿಗಳಲ್ಲಿ ಹೂಡಿಕೆ

ನಿವಾಸ ಆಸ್ತಿ :

-ಪೋಯಸ್ ಗಾರ್ಡನ್'ನಲ್ಲಿರುವ ವೇದ ನಿಲಯಂ ಜಯಲಲಿತಾ ನಿವಾಸ 24 ಸಾವಿರ ಚದರ ಅಡಿ ವಿಸ್ತಾರದ ಜಾಗದಲ್ಲಿ 21, 662 ಚದರ ಅಡಿ ಆಯದಲ್ಲಿ ಇದೆ.

-ನಿವಾಸದ ಮೌಲ್ಯ - 43.96 ಕೋಟಿ, 1967ರಲ್ಲಿ ತಾಯಿಯೊಂದಿಗೆ 1.32 ಲಕ್ಷಕ್ಕೆ ಕೊಂಡುಕೊಂಡಿದ್ದರು.

-ತೆಲಂಗಾಣದ ರಂಗಾರೆಡ್ಡಿ ಜಿಲ್ಲೆ ಜೇಡಿಮಟ್ಟ ಗ್ರಾಮದಲ್ಲಿ 14.56 ಎಕರೆ ಕೃಷಿ ಭೂಮಿಯೂ ಇವರಲ್ಲಿತ್ತು ಇದನ್ನು 1968ರಲ್ಲಿ ತೆಲಂಗಾಣದ ಆಸ್ತಿ ಖರೀದಿಸಿದ್ದರು.

-1981ರಲ್ಲಿ ಚೆಯ್ಯೂರ್ ಗ್ರಾಮದ ಆಸ್ತಿಯನ್ನು ಖರೀದಿಸಿದ್ದರು.

-ಹೈದ್ರಾಬಾದ್ ನ 1 ಕಟ್ಟಡ ಸೇರಿದಂತೆ ನಾಲ್ಕು ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದರು.

ವಾಹನಗಳು :

ಜಯಲಲಿತಾ 2 ಟೋಯೋಟೋ ಕಾರುಗಳನ್ನು ಹೊಂದಿದ್ದರು, ಇದರ ಮೌಲ್ಯ ಬರೋಬ್ಬರಿ 40 ಲಕ್ಷ. ಜೊತೆಗೆ ಒಂದು ಟೆಂಪೋ ಟ್ರಾವೆಲರ್, ಟೆಂಪೋ ಟ್ಯಾಕ್ಸಿ, ಮಹೀಂದ್ರಾ ಜೀಪ್, 1980 ರ ಮಾಡೆಲ್ಲಿನ ಅಂಬಾಸಿಡರ್ ಕಾರು, ಒಂದು ಮಹೀಂದ್ರಾ ಬೊಲೆರೋ, ಸ್ವರಾಜ್ ಮಜ್ಡಾ ಮ್ಯಾಕ್ಸಿ, 1990ರ ಮಾಡೆಲ್ಲಿನ ಕಾಂಟೆಸಾ ಕಾರು ಹೊಂದಿದ್ದರು.

ಚಿನ್ನಾಭರಣಗಳು:

21. 280 ಗ್ರಾಂ ಚಿನ್ನಾಭರಣ

1250 ಕೆ.ಜಿ ಬೆಳ್ಳಿ