ಬೆಂಗಳೂರು[ಮಾ. 11]  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವೈಸ್ ಛಾನ್ಸಲರ್ ಡಾ.ಶಿವಲಿಂಗಯ್ಯ ಅವರ  ಅಧಿಕಾರ ಅವಧಿ ವಿಸ್ತರಣೆ ಮಾಡಲಾಗಿದೆ.

ಮಾರ್ಚ್ 10ಕ್ಕೆ ಅವರ ಅವಧಿ ಮುಗಿಯುತ್ತಿತ್ತು. ಆದರೆ 31 ಮೇ 2019ರವರೆಗೆ ಅವರ ಅಧಿಕಾರ ವಿಸ್ತರಣೆ ಮಾಡಲಾಗಿದೆ ಎಂದು ವಿಶ್ವವಿದ್ಯಾನಿಲಯದ ಛಾನ್ಸಲರ್ ರಾಜ್ಯಪಾಲ ವಿ.ಆರ್.ವಾಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರಕಾರಿ ನಿಯಮಗಳ ಅನ್ವಯ ಹೊಸ ವೈಸ್ ಛಾನ್ಸಲರ್ ನೇಮಕ ಆಗುವವರೆಗೂ ಶಿವಲಿಂಗಯ್ಯ ಮುಂದುವರಿಯಲಿದ್ದಾರೆ.