ಬೆಂಗಳೂರು (ಅ.01): ಖ್ಯಾತ ಚಲನಚಿತ್ರ ನಿರ್ಮಾಪಕ ಸುರೇಂದ್ರ ಬಾಬು ಅವರನ್ನು ಬೇಮಗಳೂರು ಪೊಲೀಸರು ಬಂಧಿಸಿದ್ದಾರೆ.

ಅನಧಿಕೃತವಾಗಿ ನಿರ್ಮಿಸಿದ್ದ ಮನೆ ತೆರವು ಮಾಡುವ ವೇಳೆ ತಹಸೀಲ್ದಾರ್​’ಗೆ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿರುವ ಆರೋಪ ಅವರ ಮೇಲಿದೆ.

ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸ ಠಾಣೆಯಲ್ಲಿ ಬಾಬು ವಿರುದ್ಧ ಐಪಿಸಿ 353ರಡಿ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಲಾಗಿದೆ.

ಸುರೇಂದ್ರ ಬಾಬು, ಕಿರುತೆರೆ ನಟಿ ಹೇಮಶ್ರೀ ಕೊಲೆ ಪ್ರಕರಣದಲ್ಲೂ ಆರೋಪಿಯಾಗಿದ್ದಾರೆ. 2012 ಅ.9ರಂದು ಹೇಮಶ್ರೀ ಕೊಲೆ ನಡೆದಿತ್ತು.