ನಿರ್ದೇಶಕ ಪ್ರೇಮ್ ಹಾಗೂ ನಿರ್ಮಾಪಕ ಶ್ರೀನಿವಾಸ್ ನಡುವೆ ಮಾತಿನ ಚಕಮಕಿ ನಡೆದಿದೆ. ತಾವು ನೀಡಿದ ಹಣವನ್ನೂ ಪ್ರೇಮ್ ವಾಪಸ್ ನೀಡಿಲ್ಲ. ಸಿನಿಮಾ ಕೂಡ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ. 

ಬೆಂಗಳೂರು : ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ನಿರ್ದೇಶಕ ಪ್ರೇಮ್‌ ಹಾಗೂ ನಿರ್ಮಾಪಕ ಕನಕಪುರ ಶ್ರೀನಿವಾಸ್‌ ನಡುವೆ ಗುರುವಾರ ಜಟಾಪಟಿ ನಡೆದಿದೆ. ಈ ಸಂದರ್ಭದಲ್ಲಿ ಶ್ರೀನಿವಾಸ್‌ ಅವರನ್ನು ಮನವೊಲಿಸಲು ಆಗದೆ, ಅತ್ತ ಪ್ರೇಮ್‌ ತಮ್ಮನ್ನು ತೇಜೋವಧೆ ಮಾಡಿದ್ದಾರೆಂದು ಪಟ್ಟು ಸಡಿಲಿಸದ ಕಾರಣ ಇಬ್ಬರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.

ಬೆಂಗಳೂರಿನ ಚಂದ್ರಲೇಔಟ್‌ನಲ್ಲಿರುವ ಪ್ರೇಮ್‌ ಮನೆ ಮುಂದೆ ಗುರುವಾರ ಸಂಜೆ ಇಷ್ಟೆಲ್ಲ ಗಲಾಟೆ ನಡೆದಿದೆ. ಪುನೀತ್‌ ರಾಜ್‌ಕುಮಾರ್‌ ನಟನೆಯ ‘ರಾಜ್‌’ ಸಿನಿಮಾ ನಂತರ ಕನಕಪುರ ಶ್ರೀನಿವಾಸ್‌ ಅವರಿಗೆ ಸಿನಿಮಾ ಮಾಡಿಕೊಡುವುದಕ್ಕಾಗಿ .9 ಲಕ್ಷವನ್ನು ಶ್ರೀನಿವಾಸ್‌ ಅವರಿಂದ ಪ್ರೇಮ್‌ ಮುಂಗಡವಾಗಿ ಪಡೆದಿದ್ದರು. ಈ ಪೈಕಿ .4 ಲಕ್ಷ ನಗದು ರೂಪದಲ್ಲಿ, .5 ಲಕ್ಷಗಳ ಚೆಕ್‌ ನೀಡಲಾಗಿತ್ತು. 

ಆದರೆ, ತಮಗೆ ಪ್ರೇಮ್‌ ಸಿನಿಮಾನೂ ಮಾಡಿಕೊಟ್ಟಿಲ್ಲ, ಮುಂಗಡ ಹಣವೂ ವಾಪಸ್ಸು ನೀಡಿಲ್ಲ ಎಂದು ಕನಕಪುರ ಶ್ರೀನಿವಾಸ್‌ ಅವರು ಅರೋಪಿಸಿದ್ದಾರೆ. ಹೀಗಾಗಿ ಹಣ ಕೊಡಲೇಬೇಕೆಂದು ಪ್ರೇಮ್‌ ಮನೆ ಮುಂದೆ ಬಂದಾಗ ಇಬ್ಬರ ನಡುವೆ ಜಟಾಪಟಿ ನಡೆದಿದೆ ಎನ್ನಲಾಗಿದೆ.

ಶ್ರೀನಿವಾಸ್‌ ಬಳಿ ಅಡ್ವಾನ್ಸ್‌ ತೆಗೆದುಕೊಂಡಿದ್ದು ನಿಜ. ಆದರೆ, ಒಂದೂವರೆ ವರ್ಷ 12 ಜನ ತಂಡ ಕಟ್ಟಿಕೊಂಡು ಸಿನಿಮಾಗಾಗಿ ಕೆಲಸ ಮಾಡಿದ್ದೇವೆ. ಶ್ರೀನಿವಾಸ್‌ ಅವರು ಸಿನಿಮಾ ಮಾಡೋಕೆ ಮುಂದೆ ಬರಲಿಲ್ಲ. ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ನನ್ನ ತೇಜೋವಧೆಯಾಗಿದೆ ಎಂದು ದೂರಿದ್ದಾರೆ. ನನ್ನಿಂದ ತಪ್ಪಾಗಿದ್ದರೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಡಲಿ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡ ಪವರ್ ಸ್ಟಾರ್ ಜೋಡಿ!

ಬೆಳ್ಳಂದೂರು ಕೆರೆ ಮಾಲಿನ್ಯ ತಡೆಗಟ್ಟಲು ಮುಂದಾದ ರಶ್ಮಿಕಾ ಮಂದಣ್ಣ