ಸ್ಯಾಂಡಲ್ ವುಡ್ ಪ್ರಸಿದ್ಧ ನಿರ್ಮಾಪಕನಿಂದ ಬಹುಕೋಟಿ ವಂಚನೆ : ಸಿಐಡಿ ತನಿಖೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 25, Jul 2018, 9:49 AM IST
Producer Anand Appugol Fraud case enquiry from CID
Highlights

ಸ್ಯಾಂಡಲ್ ವುಡ್ ಪ್ರಸಿದ್ಧ ನಿರ್ಮಾಪಕನಿಂದ ನಡೆದ ಬಹುಕೋಟಿ ವಂಚನೆ ಪ್ರಕರಣವನ್ನು ಇದೀಗ ಸಿಐಡಿಗೆ ಹಸ್ತಾಂತರ ಮಾಡಲಾಗಿದೆ. 

ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಲನಚಿತ್ರ ನಿರ್ಮಾಪಕ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸೌಹಾರ್ದ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ಆನಂದ ಅಪ್ಪುಗೋಳ ಸೊಸೈಟಿ ಗ್ರಾಹಕರಿಗೆ ಬಹುಕೋಟಿ ವಂಚನೆ ಮಾಡಿರುವ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತ ರಿಸಲಾಗಿದೆ. 

ಸಂಗೊಳ್ಳಿ ರಾಯಣ್ಣ ಸೊಸೈಟಿಯ ಗ್ರಾಹಕರ ಸುಮಾರು 320 ಕೋಟಿ ಠೇವಣಿಯನ್ನು ಮರಳಿ ನೀಡದೇ ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ತಾವಿಟ್ಟ ಹಣವನ್ನು ಮರಳಿ ನೀಡುವಂತೆ ಗ್ರಾಹಕರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದರೆ, ಈವರೆಗೂ ಗ್ರಾಹಕರ ಹಣ ಮಾತ್ರ ವಾಪಸ್ ನೀಡಿಲ್ಲ.

loader