ನವದೆಹಲಿ : ನಿರಂತರವಾಗಿ ವಿವಾದಾತ್ಮಕ ಹೇಳಿಕೆ ನೀಡುವ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಇದೀಗ ಮತ್ತೊಮ್ಮೆ ವಿವಾದಿತ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. 

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರಾವಣ ಎಂದು ಕರೆದಿದ್ದು, ಪ್ರಿಯಾಂಕ ಗಾಂಧಿಯನ್ನು ಶೂರ್ಪನಕಿ  ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. 

ಬಲ್ಲಿಯಾ ಕ್ಷೇತ್ರದ ಶಾಸಕ ಸುರೇಂದ್ರ ಸಿಂಗ್ ಇದೇ ವೇಳೆ ಕಾಂಗ್ರೆಸ್ ಪಕ್ಷದ ಚುನಾವಣಾ ಭವಿಷ್ಯವನ್ನೂ ನುಡಿದಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಸಾಧ್ಯವಿಲ್ಲ.  ದೇಶದಲ್ಲಿ ಇನ್ನೆಂದು ಕಾಂಗ್ರೆಸ್ ಅಧಿಕಾರಕ್ಕೆ ಬರಲಾಗುವುದಿಲ್ಲ ಎಂದಿದ್ದಾರೆ. 

ಅಲ್ಲದೇ ರಾವಣನ ವಿರುದ್ಧ ಶ್ರೀರಾಮ ಈಗಾಗಲೇ ಯುದ್ಧವನ್ನು  ಆರಂಭ ಮಾಡುತ್ತಿದ್ದಾನೆ. ರಾಮನಿಗೆ ಎದುರಾಳಿಯಾಗಿ ರಾವಣ ಮೊದಲು ಕಳಿಸಿದ್ದೆ ತನ್ನ ಸಹೋದರಿ ಶೂರ್ಪನಕಿಯನ್ನು.

ಮುಂದಿನ ಲೋಕಸಭಾ ಚುನಾವಣಾ ಕಣದಲ್ಲಿ ರಾಹುಲ್ ಗಾಂಧಿ ರಾವಣನಾಗಿದ್ದು, ಶೂರ್ಪನಕಿಯಾಗಿ ಪ್ರಿಯಾಂಕ ಮುಂದೆ ಬಿಟ್ಟಿದ್ದಾರೆ.  ಮೋದಿ ರಾಮನಾಗಿ ಹೋರಾಟಕ್ಕೆ ಇಳಿಯುತ್ತಾರೆ ಎಂದು ಹೇಳಿದ್ದಾರೆ.