ನವದೆಹಲಿ :  ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಅಳಿಯ, ಪ್ರಿಯಾಂಕ ಗಾಂದಿ ಪತಿ ಇಷ್ಟು ದಿನಗಳ ಕಾಲ ದೊಡ್ಡ ಬ್ಯುಸಿನೆಸ್ ಮನ್ ಆಗಿದ್ದು ಇದೀಗ ಇನ್ನೊಂದು ಇನ್ನಿಂಗ್ಸ್ ಆರಂಭಿಸುವ ಸುಳಿವು ನೀಡಿದ್ದಾರೆ. 

ಅವರ ಫೇಸ್ ಬುಕ್ ಸ್ಟೇಟಸ್ ಒಂದು ವಾದ್ರಾ ರಾಜಕೀಯಕ್ಕೆ ಬರುತ್ತಾರಾ ಎನ್ನುವ ಹಿಂಟ್ ನೀಡಿದೆ. ಇತ್ತೀಚೆಗಷ್ಟೇ ಪ್ರಿಯಾಂಕ ಗಾಂಧಿ ಕೂಡ ರಾಜಕೀಯ ಪ್ರವೇಶಿಸಿದ್ದು, ಇದೀಗ ವಾದ್ರಾ ಕೂಡ ಪ್ರವೇಶಿಸುತ್ತಾರಾ ಎನ್ನುವ ಮಾತು ಜೋರಾಗಿದೆ. 

ತಮ್ಮ ಖಾತೆಯಲ್ಲಿ  ದೇಶದ ವಿವಿಧ ಪ್ರದೇಶಗಳಲ್ಲಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದೇನೆ. ಉತ್ತರ ಪ್ರದೇಶದಲ್ಲಿ ಹೆಚ್ಚು ಸಕ್ರೀಯವಾಗಿದ್ದು, ಜನರಿಗಾಗಿ ಇನ್ನೂ ಸ್ವಲ್ಪ ಹೆಚ್ಚು ಕೆಲಸ ಮಾಡಬೇಕೆನ್ನುವುದಿದೆ. ಜನರಿಂದ ಈಗಾಗಲೇ ಹೆಚ್ಚಿನ ಗೌರವ ಪ್ರೀತಿಯೂ ದೊರಕಿದೆ. ಈ ಎಲ್ಲವನ್ನು ಸದ್ಬಳಕೆ ಮಾಡಿಕೊಳ್ಳಬೇಕೆನ್ನುವ ಹಂಬಲವಿದೆ.  ದೇಶಕ್ಕಾಗಿ ತಮ್ಮ ಪಾತ್ರವನ್ನು ಕೊಂಚ ಹೆಚ್ಚಾಗಿಯೇ ತೊಡಗಿಸಿಕೊಳ್ಳಬೇಕೆನ್ನುವ ಹಂಬಲವಿದೆ ಎಂದು ಹೇಳಿದ್ದಾರೆ. 

ಆದರೆ ಈ ಬಗ್ಗೆ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿ ಜನಸೇವೆ ಮಾಡಬೇಕೆಂದಲ್ಲಿ ರಾಜಕೀಯಕ್ಕೆ ಸೇರಬೇಕೆಂದಿಲ್ಲ. ಆದರೆ ಈ ಬಗ್ಗೆ ಜನರು ನಿರ್ಧಾರ ಮಾಡುತ್ತಾರೆ ಎಂದೂ ಹೇಳಿದ್ದಾರೆ. 

ಅತೀ ಹೆಚ್ಚಿನ ಸಂಖ್ಯೆಯ ಭ್ರಷ್ಟಾಚಾರ ಪ್ರಕರಣಗಳಲ್ಲಿ ವಾದ್ರಾ ಸಿಲುಕಿದ್ದು, ಈಗಾಗಲೇ ಅನೇಕ ಪ್ರಕರಣಗಳಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.