ಭಾರತೀಯ ಸಿನಿಮಾಗಳ ಬಗ್ಗೆ ಪ್ರಿಯಾಂಕ ವಿವಾದಾತ್ಮಕ ಹೇಳಿಕೆ ಸ್ತನಗಳು, ನಿತಂಬಗಳ ಆಕರ್ಷಣೆಯ ಮೇಲೆಯೇ ಸಿನಿಮಾಗಳು ನಡೆಯುತ್ತಿವೆ ಎಂದ ನಟಿ
ಮುಂಬೈ[ಜೂ.11]: ಅಮೆರಿಕದ ಕ್ವಾಂಟಿಕೋ ಧಾರಾವಾಹಿಯ ವಿವಾದದ ನಂತರ ಬಾಲಿವುಡ್ ನಟಿ ಪ್ರಯಾಂಕಾ ಛೋಪ್ರಾ ಮತ್ತೊಂದು ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಾಗಿದ್ದಾರೆ.
ವಿದೇಶದಲ್ಲಿ ಇತ್ತೀಚಿಗಷ್ಟೆ ರೆಡ್ ಕಾರ್ಪೆಟ್ ಸಂದರ್ಶನದಲ್ಲಿ ಪತ್ರಕರ್ತೆಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಭಾರತೀಯ ಸಿನಿಮಾಗಳಲ್ಲಿ ಎಲ್ಲವೂ ನಡೆಯುವುದು ಮಹಿಳೆಯರ ಸ್ತನ ಹಾಗೂ ನಿತಂಬಗಳ ಆಕರ್ಷಣೆಯ ಮೂಲಕ. ಸ್ತನ ಹಾಗೂ ನಿತಂಬಗಳ ಮೇಲೆಯೇ ನಿರ್ಧಾರವಾಗುತ್ತದೆ ಎಂದಿದ್ದಾರೆ.
ಈ ಹೇಳಿಕೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು ಪ್ರಿಯಾಂಕ ಅವರ ವರ್ತನೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಖಂಡನೆ ವ್ಯಕ್ತವಾಗುತ್ತಿದೆ. ಕೆಲವೇ ದಿನಗಳ ಹಿಂದಷ್ಟೆ ಅಮೆರಿಕದ ‘ಕ್ವಾಂಟಿಕೋ’ ಧಾರವಾಹಿಯಲ್ಲಿ ಭಾರತದ ಹಿಂದೂ ರಾಷ್ಟ್ರೀಯವಾದಿಗಳನ್ನು ಉಗ್ರವಾದಿಗಳೆಂದು ಬಿಂಬಿಸಿದ್ದಕ್ಕೆ ಅಮೆರಿಕ ಟೆಲಿವಿಷನ್ ಸ್ಟುಡಿಯೋ ಭಾರತೀಯರ ಕ್ಷಮೆಯಾಚಿಸಿತ್ತು. ಇದೇ ಧಾರವಾಹಿಯಲ್ಲಿ ಪ್ರಿಯಾಂಕ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅವರು ಕೂಡ ಕ್ಷಮೆ ಕೋರಿದ್ದರು.
