ದಾಖಲೆ ಸಂಭಾವನೆ ಪಡೆದ ಪ್ರಿಯಾಂಕಾ ಚೋಪ್ರಾ

First Published 4, Jul 2018, 4:31 PM IST
Priyanka Chopra reportedly getting Rs 6.5cr for Bharat
Highlights
  • ಅಬ್ಬಾಸ್ ಅಲಿ ನಿರ್ದೇಶನದ ಭಾರತ್ ಸಿನಿಮಾದಲ್ಲಿ  6.5 ಕೋಟಿ ರೂ. ಸಂಭಾವನೆ
  • ಈ ಮೊದಲು  ದೀಪಿಕಾ ಪಡುಕೋಣೆ 12 ಕೋಟಿ, ಕಂಗನಾ ರನಾವತ್ 11 ಕೋಟಿ ಪಡೆದಿದ್ದರು

ಮುಂಬೈ[ಜು.04]: ಅಲಿ ಅಬ್ಬಾಸ್ ನಿರ್ದೆಶನದ ಸಲ್ಮಾನ್ ಖಾನ್ ನಾಯಕನಾಗಿ ಅಭಿನಯಿಸುತ್ತಿರುವ ಬಾಲಿವುಡ್ ಚಿತ್ರ ಭಾರತ್'ನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಅತೀ ಹೆಚ್ಚು ಸಂಭಾವನೆ ಪಡೆದಿದ್ದಾರೆ.

ಈ ಚಿತ್ರದಲ್ಲಿ 6.5 ಕೋಟಿ ರೂ. ಪಡೆದಿದ್ದು  ಅತೀ ಹೆಚ್ಚು ಸಂಭಾವನೆ ಪಡೆದವರಲ್ಲಿ 3ನೇ ಸ್ಥಾನ ಪ್ರಿಯಾಂಕಾ ಅವರದ್ದಾಗಿದೆ. ಈ ಮೊದಲು ದೀಪಿಕಾ ಪಡುಕೋಣೆ ಪದ್ಮಾವತ್ ಚಿತ್ರಕ್ಕಾಗಿ 12 ಕೋಟಿ ಪಡೆದಿದ್ದರೆ, ಕಂಗನಾ ರನಾವತ್ 11 ಕೋಟಿ ಪಡೆದಿದ್ದರು. 

ಪ್ರಿಯಾಂಕಾ ಬಾಲಿವುಡ್ ಚಿತ್ರಗಳಲ್ಲದೆ ಹಾಲಿವುಡ್ ನಲ್ಲೂ ಹೆಚ್ಚು ಖ್ಯಾತಿ ಗಳಿಸುತ್ತಿದ್ದು ಅಮೆರಿಕಾದ ರಿಯಾಲಿಟಿ ಶೋಗಳಲ್ಲಿ ಕೂಡ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. 2016ರಲ್ಲಿ ಜೈ ಗಂಗಾಜಲ್ ನಂತರ 2 ವರ್ಷಗಳಲ್ಲಿ ಯಾವುದೇ ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಭಾರತ್ ಸಿನಿಮಾ 2104 ರ ಕೊರಿಯನ್ ಚಿತ್ರ ಓಡ್ ತು ಮೈ ಫಾದರ್ ಸಿನಿಮಾದಿಂದ ಸ್ಫೂರ್ತಿ ಪಡೆದಿದ್ದು ಟಬೂ, ಸುನೀಲ್ ಗ್ರೋವರ್, ದಿಶಾ ಪಟಾಣಿ ಪ್ರಮುಖ ತಾರಾ ಬಳಗದಲ್ಲಿದ್ದಾರೆ.

 

loader