ಝುಕರ್‌ಬರ್ಗ್‌ಗಿಂತಲೂ ಪ್ರಿಯಾ ವಾರಿಯರ್‌ಗೆ ಹೆಚ್ಚು ಫಾಲೋಯರ್ಸ್

First Published 21, Feb 2018, 4:00 PM IST
Priya Prakash Varrier Has More Instagram Followers Than Its Owner Mark Zuckerberg
Highlights

ಕಣ್ ಹೊಡೆದು, ಕೈಯಲ್ಲೇ ಗನ್ ತೋರಿಸಿದ ಮಲಯಾಳಂ ನಟಿ ಪ್ರಿಯಾ ಪ್ರಕಾಶ ವಾರಿಯರ್‌ಗೆ, ಮಾಲೀಕ ಝುಕರ್‌ಬರ್ಗ್‌ಗಿಂತಲೂ ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋಯರ್ಸ್ ಇದ್ದಾರೆ.

ಬೆಂಗಳೂರು: ಕಣ್ ಹೊಡೆದು, ಕೈಯಲ್ಲೇ ಗನ್ ತೋರಿಸಿದ ಮಲಯಾಳಂ ನಟಿ ಪ್ರಿಯಾ ಪ್ರಕಾಶ ವಾರಿಯರ್‌ಗೆ, ಮಾಲೀಕ ಝುಕರ್‌ಬರ್ಗ್‌ಗಿಂತಲೂ ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋಯರ್ಸ್ ಇದ್ದಾರೆ.

ರಾತ್ರಿ ಬೆಳಗಾಗುವುದರಲ್ಲಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆದ ಈ ಬೆಡಗಿಗೆ ಎಲ್ಲರೂ ಫಿದಾ ಆಗಿದ್ದು ಇದೀಗ ಇತಿಹಾಸ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್ ಗಿಟ್ಟಿಸಿಕೊಂಡ ಈ ಬೆಡಗಿಗೆ ವಿಶ್ವಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. 'ಒರು ಅದಾರ್ ಲವ್' ಚಿತ್ರದ 'ಮಾಣಿಕ್ಯ ಮಲರಯಾ ಪೂವಿ' ಹಾಡು ಈ ನಟಿಗೆ ಸಿಕ್ಕಾಪಟ್ಟೆ ಬೇಡಿಕೆ ಹೆಚ್ಚಾಗುವಂತೆ ಮಾಡಿದೆ. 

18 ವರ್ಷದ ಈ ನಟಿ ಇನ್‌‌ಸ್ಟಾಗ್ರಾಮ್‌ನಲ್ಲಿಯೂ 45 ಲಕ್ಷ ಫಾಲೋಯರ್ಸ್ ಹೊಂದಿದ್ದರೆ, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಮಾಲೀಕ ಮಾರ್ಕ್ ಝುಕರ್‌ಬರ್ಗ್‌ಗೆ 40 ಲಕ್ಷ ಫಾಲೋಯರ್ಸ್‌ ಇದ್ದಾರೆ. 

ಮಾದಕ ನಟಿ ಸನ್ನಿ ಲಿಯೋನ್‌ಗಿಂತಲೂ ಹೆಚ್ಚಾಗಿ ಪ್ರಿಯಾರನ್ನು ಸರ್ಜ್ ಮಾಡಿದ ಸಂಖ್ಯೆ ಹೆಚ್ಚಾಗಿದೆ.

loader